ಆದರ್ಶ ಸೌಹಾರ್ದ ಪತ್ತಿನ ಸಹಕಾರಿ ಸಂಘ 8.49 ಲಕ್ಷ ರೂಪಾಯಿ ಲಾಭದಲ್ಲಿದೆ : ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.09  : ಆದರ್ಶ ಸೌಹಾರ್ದ ಪತ್ತಿನ ಸಹಕಾರಿ ಸಂಘ 2022-23 ನೇ ಸಾಲಿನಲ್ಲಿ ಎಂಟು ಲಕ್ಷದ 49 ಸಾವಿರದ 772 ರೂ.ಗಳ ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.

ಐಶ್ವರ್ಯ ಫೋರ್ಟ್‍ನಲ್ಲಿ ಶನಿವಾರ ನಡೆದ ಆದರ್ಶ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಹದಿನಾಲ್ಕನೆ ವರ್ಷದ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರುಗಳ ಪರಸ್ಪರ ಸಹಕಾರದಿಂದ ಕಳೆದ ಹದಿಮೂರು ವರ್ಷಗಳಿಂದಲೂ ಆದರ್ಶ ಸೌಹಾರ್ಧ ಪತ್ತಿನ ಸಹಕಾರ ಸಂಘ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ. ಸಂಘದಿಂದ ಸಾಲ ಪಡೆಯುವ ಸದಸ್ಯರು ಸಕಾಲಕ್ಕೆ ಸರಿಯಾಗಿ ಪಾವತಿಸಬೇಕು. ಜಾಮೀನುದಾರರ ಮೇಲೆ ಸಾಲಗಾರರಷ್ಟೆ ಜವಾಬ್ದಾರಿಯಿದೆ. ಜಾಮೀನು ಆಗುವ ಪೂರ್ವದಲ್ಲಿ ಸಾಲಗಾರನ ವೈಯಕ್ತಿಕ ಸ್ಥಿತಿ, ಸಾಲದ ಉದ್ದೇಶ ಮತ್ತು ಸಾಲವನ್ನು ತೀರಿಸುವ ಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಒಮ್ಮೆ ಸಾಲಗಾರನು ಸುಸ್ತಿ ಬಾಕಿದಾರನಾದರೆ ಅದನ್ನು ತಿಳಿಸುವ ಹೊಣೆ ಜಾಮೀನುದಾರನದಾಗಿರುತ್ತದೆ. ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಹಕಾರಿಗೆ ಧಕ್ಕೆ ಬಾರದಂತೆ ಸಾಲವನ್ನು ಮರುಪಾವತಿ ಮಾಡಿಸಬೇಕು ಎಂದು ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ ಸೂಚಿಸಿದರು.

ಸದಸ್ಯರು ಉಳಿತಾಯ ಖಾತೆ, ಪಿಗ್ಮಿ, ಸಾಲ ಪಡೆಯುವುದು ಹೀಗೆ ವ್ಯವಹರಿಸಬೇಕು. ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಮರುಪಾವತಿ ಮಾಡಿ ಆದರ್ಶ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಅಭಿವೃದ್ದಿಗೆ ಕೈಜೋಡಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.

ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ, ಕಲ್ಪವೃಕ್ಷ ಠೇವಣಿ, ಆವರ್ತಕ ಠೇವಣಿ, ಸುಮಂಗಲಿ ಠೇವಣಿ, ಜಂಟಿ ಕಂತು ಸಾಲಗಳು, ವಾಹನ, ಆಭರಣ, ಎನ್.ಎಸ್.ಸಿ. ಮನೆ/ನಿವೇಶನ, ಪಿಗ್ಮಿ ಠೇವಣಿ, ವೇತನ ಆಧಾರಿತ ಹಾಗೂ ಗೃಹೋಪಯೋಗಿ ಸಾಲ ಸೌಲಭ್ಯಗಳಿದೆ.
ಉಳಿತಾಯ ಖಾತೆಯಲ್ಲಿ ಕನಿಷ್ಟ ಎರಡು ತಿಂಗಳಿಗೆ ಒಂದರಂತೆ ಒಂದು ವರ್ಷದಲ್ಲಿ ಆರು ವಹಿವಾಟು ನಡೆಸಿರಬೇಕು. ಚಾಲ್ತಿ ಖಾತೆಯಲ್ಲಿ ಕನಿಷ್ಟ ತಿಂಗಳಿಗೆ ಒಂದರಂತೆ ವರ್ಷದಲ್ಲಿ ಹನ್ನೆರಡು ವಹಿವಾಟು ನಡೆಸಿರಬೇಕು. ಈ ನಿಯಮಗಳಲ್ಲಿ ಕನಿಷ್ಟ ಒಂದನ್ನಾದರೂ ಪ್ರತಿ ವರ್ಷ ಪಾಲಿಸದ ಸದಸ್ಯರು ಸಭೆ, ಚುನಾವಣೆಗಳಲ್ಲಿ ಪಾಲ್ಗೊಳ್ಳಲು ಮತ್ತು ಮತ ಚಲಾಯಿಸಲು ಅನರ್ಹರು. ಕಾಯ್ದೆಯ ಪ್ರಕರಣ 20 ರ ಅನ್ವಯ ಸದಸ್ಯರಾಗಿ ಮುಂದುವರೆಯಲು ಅನರ್ಹರಾಗಿರುತ್ತಾರೆ.

ಡಿವಿಡೆಂಟ್ ಹಣವನ್ನು ಪಡೆಯದೆ ಇರುವವರು ತೆಗೆದುಕೊಳ್ಳತಕ್ಕದ್ದು. ಇಲ್ಲವಾದಲ್ಲಿ ಮೂರು ವರ್ಷದ ನಂತರ ಕಾಯ್ದಿಟ್ಟ ನಿಧಿಗೆ ವರ್ಗಾಯಿಸಲಾಗುವುದು. ಸದಸ್ಯರು ಮಹಾಸಭೆಯಲ್ಲಿ ನಿರಂತರವಾಗಿ ಮೂರು ವರ್ಷ ಪಾಲ್ಗೊಳ್ಳದಿದ್ದಲ್ಲಿ ಸದಸ್ಯತ್ವ ರದ್ದಾಗಲಿದೆ ಎಂದು ಆದರ್ಶ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ ಸದಸ್ಯರುಗಳ ಗಮನಕ್ಕೆ ತಂದರು.

ಆದರ್ಶ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕರುಗಳಾದ ಜೆ.ಮಧುಸೂದನ, ಎಸ್.ವೇದಮೂರ್ತಿ, ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜಿ.ಎ.ಪ್ರಸನ್ನಕುಮಾರ್, ಎಂ.ಕೆ.ಮಲ್ಲಿಕಾರ್ಜುನ್, ಎಸ್.ಮೂರುಕಣ್ಣಪ್ಪ, ಎಂ.ವೆಂಕಟೇಶ್, ಕೆ.ರಾಜೇಶ್, ಶ್ರೀಮತಿ ಎಂ.ಜಿ.ಸರ್ವಮಂಗಳ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!