ಮಾಜಿ ಪೊಲೀಸ್ ಅಧಿಕಾರಿ ಮನೆಯ ಸೊಸೆಯಾದ್ರು ನಟಿ ರೀಷ್ಮಾ ಅಕ್ಕ..!

1 Min Read

ಬೆಂಗಳೂರು; ನಟಿ ರೀಷ್ಮಾ ನಾನಯ್ಯ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟಿ ರೀಷ್ಮಾ ನಾನಯ್ಯ ಅಂತೂ ಸಿಕ್ಕಾಪಟ್ಟೆ ಮಿಂಚಿದ್ದಾರೆ. ಗೊಲ್ಡನ್ ಕಲರ್ ಸೀರೆಯಲ್ಲಿ, ಅದಕ್ಕೆ ಒಪ್ಪುವಂತ ಸಿಂಪಲ್ ಜ್ಯುವೆಲ್ಲರಿ ಹಾಕಿ, ಮದು ಮಗಳಂತೆ ಕಂಗೊಳಿಸಿದ್ದಾರೆ. ಅಕ್ಕನ ಮದುವೆಯಲ್ಲಿ ರೀಷ್ಮಾ ಕೂಡ ಅಂದವಾಗಿ ಕಾಣುವಂತೆ ರೆಡಿಯಾಗಿದ್ದಾರೆ. ಈ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ರೀಷ್ಮಾ ನಾನಯ್ಯ ಅವರ ಅಕ್ಕ ವಿಷ್ಮಾ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಂತನಗರದ ಕೊಡವ ಸಮುದಾಯದ ಭವನದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ವಿಷ್ಮಾ ವೆಡ್ಸ್ ಅನಿರುದ್ಧ್ ಮದುವೆಗೆ ಬಂಧು – ಬಳಗ, ಸ್ನೇಹಿತರು – ಸಂಬಂಧಿಕರೆಲ್ಲ ಸೇರಿ ಹಾರೈಸಿದ್ದಾರೆ. ನವ ವಧು – ವರರಿಗೆ ಅಕ್ಷತೆ ಹಾಕಿ ಶುಭಕೋರಿದ್ದಾರೆ. ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಆಶೀರ್ವದಿಸಿದ್ದಾರೆ.

ರೀಷ್ಮಾ ನಾನಯ್ಯ ಅವರ ಅಕ್ಕ ವಿಷ್ಮಾ ಅವರು ಇದೀಗ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಮನೆಯ ಸೊಸೆಯಾಗಿದ್ದಾರೆ. ವಿಷ್ಮಾ ಅವರನ್ನು ಮದುವೆಯಾಗಿರುವ ಅನಿರುದ್ದ್, ಭಾಸ್ಕರ್ ರಾವ್ ಅವರ ಸುಪುತ್ರರಾಗಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು, 2019 ರಿಂದ 2020ರವರೆಗೂ ನಗರದ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ನಿವೃತ್ತಿ ಘೋಷಿಸಿ, ರಾಜಕೀಯದತ್ತ ಮುಖ ಮಾಡಿದರು. ಇದೀಗ ಮಗನ ಮದುವೆ ಮಾಡಿ, ಸಂಭ್ರಮಿಸಿದ್ದಾರೆ. ಆಪ್ತ ಬಳಗವನ್ನೆಲ್ಲ ಆಹ್ವಾನಿಸಿ, ಮದುವೆ ಶುಭ ಸಮಾರಂಭದಲ್ಲಿ ಮಿಂದೇಳುವಂತೆ ಮಾಡಿದ್ದಾರೆ. ಇನ್ನು ರೀಷ್ಮಾ ನಾನಯ್ಯ ತನ್ನ ಅಕ್ಕನ ಮದುವೆಯಲ್ಲಿ ಮಿಂಚಿ, ಎಲ್ಲರ ಗಮನ ಸೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *