Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಟಿ ರನ್ಯಾ ಸ್ಮಗ್ಲಿಂಗ್; ಸದನದಲ್ಲೂ ಜೋರು ಚರ್ಚೆ

---Advertisement---

ಬೆಂಗಳೂರು; ಇತ್ತೀಚೆಗಷ್ಟೇ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ಅವರು ಸಿಕ್ಕಿಬಿದ್ದಿದ್ದು, ಇದೀಗ ರಾಜಕಾರಣಿಗಳು, ಅಧಿಕಾರಿಗಳ ಕೈವಾಡ ಇರೋದು ಕೂಡ ಅದರಲ್ಲಿ ಪ್ರೂವ್ ಆಗಿದೆ. ಹೀಗಾಗಿ ಈ ಕೇಸನ್ನ ಸಿಬಿಐ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಡಿಆರ್ಐ ಕಸ್ಟಡಿಯಲ್ಲಿರುವ ರನ್ಯಾ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯಬೇಕಿದೆ. ಒಂದು ಬಾರಿ ಹೀಗೆ ಗೋಲ್ಡ್ ರವಾನೆ ಮಾಡಿರೋದಲ್ಲ. ಬಹಳ ಕಾಲದಿಂದಾನೂ ಇದು ನಡೆಯುತ್ತಲೇ ಇದೆ. ಹಾಗಾಗಿ ವಿದೇಶದಲ್ಲಿ ಯಾರ ಸಂಪರ್ಕವಿದೆ..? ಇವರ ಹಿಂದೆ ಇದ್ದ ಚಿನ್ನದ ಅಂಗಡಿ‌ಮಾಲೀಕರು ಯಾರ್ಯಾರು ಇದ್ದರು..? ರಾಜಕಾರಣಿಗಳು ಯಾರೆಲ್ಲಾ ಇದ್ದರು ಎಂಬೆಲ್ಲಾ ವಿಚಾರಗಳು ತನಿಖೆಯಿಂದ ಹೊರ ಬರಬೇಕಿದೆ. ಹೀಗಾಗಿ ಈ ಸಂಬಂಧ ಸದನದಲ್ಲಿಯೂ ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಶಾಸಕ ಸುನಿಲ್ ಕುಮಾರ್ ಈ ವಿಚಾರವನ್ನು ತೆಗೆದಿದ್ದಾರೆ. ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ಸ್ಮಗಿಂಗ್ ಆಗಿಲ್ಲ ಅಥವಾ ಅವರ್ಯಾರೋ ಗೋಲ್ಡ್ ತಂದಿಲ್ಲ. ನಮ್ಮ ಹಂತದಲ್ಲಿ ಏನು ತನಿಖೆ ನಡೆಸಬೇಕು ಅದನ್ನೆಲ್ಲ ಮಾಡ್ತೇವೆ. ಆದ್ರೆ ಈಗ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ಯಾರೂ ಇನ್ವಾಲ್ ಆಗಿದ್ದಾರೆ, ಸ್ಮಗ್ಲಿಂಗ್ ಎಷ್ಟಾಗಿದೆ ಎಂಬುದೆಲ್ಲಾ ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. ಅದಕ್ಕೂ ಮುಂಚೆ ನಾವೇನು ಹೇಳೋದಕ್ಕೆ ಆಗೋದಿಲ್ಲ. ಸಿಬಿಐ ನವರು ತನಿಖೆ ನಡೆಸುತ್ತಿದ್ದಾರೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.

ಸಿಬಿಐಗೆ ಕೊಟ್ಟಿರೋದು ಗೊತ್ತಿಲ್ಲ ಅಂತಾನೂ ಹೇಳ್ತಾ ಇದ್ದಾರೆ. ಸಿಬಿಐಗೆ ಕೊಡುವುದಕ್ಕೆ ಇನ್ನು ಏನು ಸ್ಪಷ್ಟ ಮಾಡುತ್ತಿಲ್ಲ. ಹಾಗಾದ್ರೆ ಸರ್ಕಾರಕ್ಕೆ ಗೊತ್ತಿಲ್ಲ ಅಂತ ಅಂದ್ರೆ ಹೇಗೆ..? ಇದರಿಂದ ಇನ್ಯಾರದ್ದೋ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಅಷ್ಟೇ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...