ಚೆಕ್ ಬೌನ್ಸ್ ಪ್ರಕರಣದಲ್ಲಿ ನಟಿ ಪದ್ಮಜಾ ರಾವ್ ಗೆ ಸಂಕಷ್ಟ..!

1 Min Read

 

ಬೆಂಗಳೂರು: ಸಿನಿಮಾ ಹಾಗೂ ಸೀರಿಯಲ್ ಮೂಲಕ ಪದ್ಮಜಾ ರಾವ್ ಪ್ರೇಕ್ಷಕರ ಮನಸೆಳೆದವರು. ಅದರಲ್ಲೂ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನೆಚ್ಚಿನ ಅತ್ತೆಯಾದವರು. ಇದ್ದರೆ ಈ ರೀತಿಯ ಅತ್ತೆ ಇರಬೇಕು ಎಂದು ಅದೆಷ್ಟೋ ಸೊಸೆಯಂದಿರು ದೇವರ‌ಬಳಿ ಮನವಿ ಮಾಡಿಕೊಳ್ಳುವಂತ ಗುಣವಂತೆ. ಮಾತಿನಲ್ಲಂತು ಕೇಳೋದೆ‌ ಬೇಡ. ಗುಂಡು ಹೊಡೆದಂತ ಮಾತುಗಳು. ತೂಕವಿರುವ ಡೈಲಾಗ್ ಗಳು. ಹೀಗೆ ಕಿರುತೆರೆ ಸೊಸೆಯಂದಿರ, ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ಪದ್ಮಜಾ ರಾವ್ ಅವರಿಗೆ ಸಂಕಷ್ಟ ಎದುರಾಗಿದೆ.

ಚೆಕ್ ಬೌನ್ಸ್ ಕೇಸಲ್ಲಿ ಪದ್ಮಜಾ ರಾವ್ ಗೆ ಸಂಕಷ್ಟ ಎದುರಾಗಿದೆ. ಪದ್ಮಜಾ ರಾವ್ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಇದರಿಂದ ಕಾನೂನು ಸಂಕಷ್ಟವನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚೆಕ್ ಬೌನ್ಸ್ ಆದರೆ ಆ ಸಂಬಂಧ ಪ್ರಕರಣ ದಾಖಲಿಸಬಹುದು. ಇದರಿಂದ ಚೆಕ್ ನೀಡಿದ ವ್ಯಕ್ತಿ ಜೈಲಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪದ್ಮಜಾ ರಾವ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಇನ್ನು ಈ ಪ್ರಕರಣ‌ ಸಂಬಂಧ ಪದ್ಮಜಾ ರಾವ್ ಖಾಸಗಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಮೂರು ವರ್ಷದ ಹಳೆಯ ಪ್ರಕರಣವಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ಈ ಪ್ರಕರಣ ಸಂಬಂಧ ಸೆಷನ್ ಕೋರ್ಟ್ ನಲ್ಲಿ ಅಪೀಲು ಹಾಕಿದ್ದೇನೆ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ನನ್ನ ಮೇಲಿನ ಸುಳ್ಳು ಆರೋಪ ಎಂಬುದು ಗೊತ್ತಾಗಲಿದೆ. ನಾನು ಯಾರಿಗೂ ಮೋಸ ಮಾಡಿಲ್ಲ. ಇಷ್ಟರಲ್ಲಿಯೇ ಅದು ಸುಳ್ಳು ಆರೋಪ ಎಂಬುದು ಸಾಬೀತಾಗಲಿದೆ ಎಂದು ತಮ್ಮ ಮೇಲಿನ ಪ್ರಕರಣದ ಬಗ್ಗೆ ಪದ್ಮಜಾ ರಾವ್ ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *