ಬೆಂಗಳೂರು: ನಟಿ ಕಾರುಣ್ಯ ರಾಮ್ ಸಾಲಗಾರರ ಕಾಟದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾರಣ ಅವರ ತಂಗಿ ಸಮೃದ್ಧಿ ರಾಮ್. ಆಕೆಯ ಸಾಲದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಂಗಿ ವಿರುದ್ಧ ಮಾತ್ರವಲ್ಲ, ತಂಗಿ ಸಮೃದ್ಧಿ ಸೇರಿದಂತೆ ಇನ್ನು ಹಲವರ ವಿರುದ್ಧ ದೂರು ನೀಡಿದ್ದಾರೆ. ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ವಿರುದ್ಧವೂ ದೂರನ್ನು ದಾಖಲಿಸಿದ್ದಾರೆ. ಸಮೃದ್ಧಿ ಕೂಡ ಕಾರುಣ್ಯ ರಾಮ್ ಜೊತೆಗೆ ಮನೆಯಲ್ಲಿಯೇ ವಾಸವಿದ್ದರು. ಆನ್ಲೈನ್ ಬೆಟ್ಟಿಂಗ್ ಗೀಳು ಇದ್ದಂತ ಸಮೃದ್ಧಿ, ಅದರಿಂದ ಕಳೆದುಕೊಂಡಿದ್ದು ಬರೋಬ್ಬರಿ 25 ಲಕ್ಷ ಹಣವಾಗಿದೆ. ಆನ್ಲೈನ್ ಬೆಟ್ಟಿಂಗ್ ಆಡೋದಕ್ಕೆ ಸಾಲ ಮಾಡಲಾಗಿದೆ.
ಅದರಲ್ಲೂ ಖಾಸಗಿ ವ್ಯಕ್ತಿಗಳಿಂದ ಅಂದ್ರೆ ಬಡ್ಡಿ ಹಣದಲ್ಲಿ ಬೆಟ್ಟಿಂಗ್ ಆಡಿದ್ದಾರೆ. ಇದರ ಜೊತೆಗೆ ವ್ಯವಹಾರದಲ್ಲೂ ನಷ್ಟವಾಗಿದೆ. ಈ ಎಲ್ಲಾ ಕಾರಣದಿಂದ ಸಮೃದ್ಧಿ ಮನೆಯಲ್ಲಿದ್ದಂತ ಚಿನ್ನ ಹಾಗೂ ಹಣವನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದನ್ನೆಲ್ಲ ಪ್ರಶ್ನೆ ಮಾಡಿದ್ದಕ್ಕೆ ಮನೆಯಿಂದಾನೇ ಸಮೃದ್ಧಿ ದೂರವಾಗಿದ್ದಾಳೆ. ಆದರೆ ಕಾರುಣ್ಯ ಮನೆಯಲ್ಲಿ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಸಮೃದ್ಧಿಗೆ ಹಣ ಕೊಟ್ಟವರು, ಕಾರುಣ್ಯ ರಾಮ್ ಮನೆ ಮುಂದೆ ಬಂದು ಸೀನ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಗಲಾಟೆಯನ್ನು ಮಾಡ್ತಿದ್ದಾರೆ ಎಂದು ಕಾರುಣ್ಯ ರಾಮ್ ಆರೋಪ ಮಾಡಿದ್ದಾರೆ. ಈ ಸಂಬಂಧ ಆರ್ ಆರ್ ನಗರದಲ್ಲಿ ದೂರನ್ನು ಕೂಡ ದಾಖಲು ಮಾಡಿದ್ದಾರೆ. ಸಿಸಿಬಿ ಪೊಲೀಸರು ಕೂಡ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಈ ಆನ್ಲೈನ್ ಬೆಟ್ಟಿಂಗ್ ನಿಂದ ದೂರ ಇರು ಅಂತ ಕಾರುಣ್ಯ ಸಾಕಷ್ಟು ಸಲ ಹೇಳಿದ್ರು ಕೂಡ ಸಮೃದ್ಧಿ ಕೇಳಿಲ್ಲ ಎಂಬ ಆರೋಪವೂ ಇದೆ.




