ಫ್ಯಾಟ್ ಸರ್ಜರಿಗೆ ಹೋಗಿದ್ದ ನಟಿ ಚೇತನಾ ರಾಜ್ ಸಾವು ಪ್ರಕರಣ: ಆಸ್ಪತ್ರೆಗೆ ಬೀಗ

suddionenews
1 Min Read

ಬೆಂಗಳೂರು: ನವರಂಗ್ ಬಳಿ ಇರುವ ಡಾ.ಶೆಟ್ಟಿಸ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆಂದು ಹೋಗಿದ್ದ ನಟಿ ಚೇತನಾ ರಾಜ್ ಸಾವಿಗೀಡಾಗಿದ್ದರು. ಈ ಸಂಬಂಧ ಇದೀಗ ಆಸ್ಪತ್ರೆಗೆ ಬೀಗ ಜಡಿದಿದ್ದು, ವೈದ್ಯರು ಮತ್ತು ಸಿಬ್ಬಂದಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಘಟನೆ ನಡೆದ ಬಳಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾತಣ ಎಂದು ಆರೋಪಿಸಿದ್ದರು. ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟೀಸ್ ಜಾರಿ ಮಾಡಿದ್ದಾರೆ. ಸರ್ಜರಿ ಮಾಡುವ ವೇಳೆ ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ನಟಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಹೀಗಾಗಿ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು, ಅದಕ್ಕೆ ಸ್ಪಷ್ಟೀಕರಣ ಕೇಳಲು ನೋಟಿಸ್ ನೀಡಿದ್ದಾರೆ. ಅದಕ್ಕೂ ಮುನ್ನ ಅಸ್ಪತ್ರೆಗೆ ಬೀಗ ಹಾಕಿದ್ದಾರೆ.

ಕಿರುತೆರೆ ನಟಿ ಚೇತನಾ ರಾಜ್ ಗೆ ಯಾರೋ ನೀನು ದಪ್ಪಗಿದ್ದೀಯಾ ಎಂದು ಹೇಳಿದ್ದಕ್ಕೆ ಫ್ಯಾಟ್ ಸರ್ಜರಿಗೆ ಮುಂದಾಗಿದ್ದರಂತೆ. ಅದಕ್ಕೆಂದೆ ನವರಂಗ್ ಬಳಿ ಇರುವ ಡಾ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ದಿನಾಂಕವನ್ನು ನಿಗದಿ ಮಾಡಿದ್ದರು. ಅದರಂತೆ ಸರ್ಜರಿಗೆ ಸ್ನೇಹಿತನ ಜೊತೆಗೆ ಹೋಗಿದ್ದಳು. ಆದರೆ ಸರ್ಜರಿ ವೇಳೆ ದುರಂತ ನಡೆದು, ಸಾವಿಗೀಡಾಗಿದ್ದಾಳೆ. ಸದ್ಯ ಸಾವಿನ ತನಿಖೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *