ಬಿಜೆಪಿ ಸೇರಿದ್ದ ನಟಿ ಭಾವನ ಮತ್ತೆ ಕಾಂಗ್ರೆಸ್ ಸೇರ್ಪಡೆ..!

suddionenews
1 Min Read

ನವದೆಹಲಿ: ಕಾಂಗ್ರೆಸ್ ನಲ್ಲೇ ಇದ್ದ ಭಾವನಾ ರಾಮಣ್ಣ ಮಧ್ಯೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದ ಜೊತೆಯಲ್ಲೇ ಕೈ ಜೋಡಿಸಿದ್ದಾರೆ. ಈ ಬಗ್ಗೆ ಸುರ್ಜೇವಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಭಾವನ ರಾಮಣ್ಣ ಮತ್ತೆ ಕಾಂಗ್ರೆಸ್ ಸೇರಿದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ್ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನ ಮಾಜಿ ಕಾರ್ಯಕರ್ತೆ ಹಾಗೂ ನಟಿ ಭಾವನಾ ರಾಮಣ್ಣ ಅವರು ನನ್ನನ್ನು ಭೇಟಿಯಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿ ಪಕ್ಷಕ್ಕಾಗಿ ದುಡಿಯುವ ಅಭಿಲಾಷೆ ವ್ಯಕ್ತಪಡಿಸಿದರು. ಆ ಸಂಬಂಧ ಸಂಕಲ್ಪವನ್ನು ಮಾಡಿದ್ದಾರೆ.‌ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಪಕ್ಷವೂ ಪ್ರಾಬಲ್ಯವೊಂದಲಿದೆ. ಭಾವನ ಅವರಿಗೆ ಶುಭಾಶಯ ಎಂದು ಫೋಟೋ ಹಾಕಿ ಶುಭಕೋರಿದ್ದಾರೆ.

ಈ ಹಿಂದೆ 2018ರಲ್ಲಿ ಭಾವನ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮತ್ತೆ ಹಳೇ ಪಕ್ಷಕ್ಕೆ ಮರಳಿದ್ದಾರೆ. ಪಕ್ಷದವರು ಕೂಡ ಅವರನ್ನ ಸ್ವಾಗತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *