ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

1 Min Read

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್ ಸಾವಿನ ಸುದ್ದಿ ಕೇಳಿದ ಚಿತ್ರರಂಗದ ಮಂದಿ ಕಂಬನಿ ಮಿಡಿದಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಚಿಕ್ಕವಯಸ್ಸಿಗೇನೆ ಬಾರದ ಲೋಕದ ಪಯಣ ಬೆಳೆಸಿದ್ದಾರೆ. ಈ ಸುದ್ದಿ ಅಮೂಲ್ಯ ಅವರ ಮನೆಯವರಿಗೆ ಅರಗಿಸಿಕೊಳ್ಳಲು ಅಸಾಧ್ಯವಾದದ್ದಾಗಿದೆ.

ದೀಪಕ್ ಅರಸ್ ಅವರಿಗೆ ಈಗ 42 ವರ್ಷ ವಯಸ್ಸಾಗಿತ್ತು. ಸಿನಿಮಾ ಮೇಲೆ ಅತಿಯಾದ ವ್ಯಾಮೋಹ ಹೊಂದಿದ್ದವರು. ಮನಸಾಲಜಿ ಹಾಗೂ ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶನ ಮಾಡಿ ಹೆಸರು ಮಾಡಿದ್ದರು. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುವ ಬಯಕೆಯನ್ನು ಹೊಂದಿದ್ದರು. ಒಳ್ಳೆಯ ವ್ಯಕ್ಯಿತ್ವ, ಸರಳ, ಸಾಧು. ಎಲ್ಲರೊಳು ಒಟ್ಟುಗೂಡುವ ಗುಣವಿದ್ದ ದೀಪಕ್ ಇಂದು ಎಲ್ಲರೊಟ್ಟಿಗೆ ಇಲ್ಲ.

ದೀಪಕ್ ಅರಸ್ ಅವರು ಬಹುಕಾಲದಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಕಿಡ್ನಿ ವೈಫಲ್ಯದಿಂದ ಅವರು ಬದುಕಿ ಬರಲೇ ಇಲ್ಲ. ಕಿಡ್ನಿ ವೈಫಲ್ಯವಾಗಿದ್ದ ದೀಪಕ್ ಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ. ನಾಳೆ ಅಂತ್ಯಕ್ರಿಯೆ ಎಲ್ಲಿ, ಎಷ್ಟೊತ್ತಿಗೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಗನನ್ನು ಕಳೆದುಕೊಂಡ ತಾಯಿ, ಸಹೋದರನನ್ನು ಕಳೆದುಕೊಂಡ ಅಮೂಲ್ಯ ಹಾಗೂ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಸಿನಿಮಾ ಬಗ್ಗೆ ಸಾವಿರ ಕನಸು ಕಂಡಿದ್ದ ನಿರ್ದೇಶಕ, ಆರೋಗ್ಯದ ಕಡೆ್ಎ ಗಮನವೇ ಕೊಟ್ಟಿಲ್ಲ. ಕಿಡ್ನಿ ವೈಫಲ್ಯವಾಗಿರುವ ವಿಚಾರ ತಿಳಿದಾಗಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರುಹ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *