ವಿಜಯ್ ರ‌್ಯಾಲಿ ನೋಡಲು ಬಂದ ಜನರಲ್ಲಿ 40 ಜನ ಜೀವ ಕಳೆದುಕೊಂಡಿದ್ದಾರೆ. 50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಆದ್ರೆ ಈ ಘಟನೆ ನಡೆದ ಸಂದರ್ಭದಲ್ಲಿ ನಟ ವಿಜಯ್ ಪ್ರೈವೇಟ್ ಜೆಟ್ ನಲ್ಲಿ ಹೊರಟುಬಿಟ್ಟಿದ್ದರು. ಜನರಿಗೆ ಏನಾಯ್ತು..? ಪರಿಸ್ಥಿತಿಯನ್ನ ಹೇಗೆ ನಿಭಾಯಿಸ್ತಾ ಇದ್ದಾರೆ..? ಅದ್ಯಾವುದನ್ನು ಗಮನ ಹರಿಸಲೇ ಇಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ವಿಜಯ್ ಅವರನ್ನು ಬಂಧಿಸುವಂತೆ ಒತ್ತಾಯ ಕೂಡ ಕೇಳಿ ಬಂದಿತ್ತು.
ಈ ಘಟನೆಯ ಬಗ್ಗೆ ಮೌನ ಮುರಿದ ವಿಜಯ್, ಈ ಘಟನೆಯಿಂದ ಹೃದಯ ಚೂರಾಗಿದೆ. ಅಸಹನೀಯ ಪರಿಸ್ಥಿತಿ, ಆ ನೋವನ್ನ ವಿವರಿಸುವುದಕ್ಕೆ ಸಾಧ್ಯವಿಲ್ಲ. ದುಃಖದಲ್ಲಿದ್ದೇನೆ. ಈ ಘಟನೆಯಿಂದ ನನ್ನ ಹೃದಯ ಒಡೆದು ಹೋಗಿದೆ. ಕರೂರಿನಲ್ಲಿ ಜೀವ ಕಳೆದುಕೊಂಡ ನಮ್ಮ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಕರೂರಿನಲ್ಲಿ ಸತ್ತವರಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ಸಮಾವೇಶದ ವೇಳೆ ನಡೆದ ಅಹಿತಕರ ಘಟನೆ ತೀವ್ರ ದುಃಖ ತಂದಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಗೃಹಸಚಿವ ಅಮಿತ್ ಶಾ, ಕೇಂದ್ರ ಸಚಿವ ಹೆಚ್ಡಿ.ಕುಮಾರಸ್ವಾಮಿ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವರು, ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದಾರೆ.
