ನಟ ಶ್ರೀಮುರುಳಿ ಕಾಲಿಗೆ ಶಸ್ತ್ರ ಚಿಕಿತ್ಸೆ : ಎಷ್ಟು ತಿಂಗಳು ವಿಶ್ರಾಂತಿಯಲ್ಲಿರಬೇಕು..?

1 Min Read

‘ಮದಗಜ’ ಸಕ್ಸಸ್ ಬಳಿಕ ನಟ ಶ್ರೀಮುರುಳಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಜೊತೆಗೂಡಿ ‘ಬಘೀರ’ ಸಿನಿಮಾಗೆ ಸಹಿ ಹಾಕಿದ್ದರು. ಮುಹೂರ್ತ ಕಂಡಿದ್ದನ್ನು ನೋಡಿದರೆ ಇಷ್ಟೊತ್ತಿಗೆ ಸಿನಿಮಾ ಥಿಯೇಟರ್ ಗೆ ಬರಬೇಕಿತ್ತೇನೋ. ಆದರೆ ಅದ್ಯಾಕೋ ಸಿನಿಮಾ ತುಂಬಾನೇ ತಡವಾಗಿದೆ.

ಹಾಗೋ ಹೀಗೋ ಇನ್ನೊಂದು ಎರಡು ದಿನದ ಶೂಟಿಂಗ್ ಇತ್ತು. ಮುಗಿಸಿ ಥಿಯೇಟರ್ ಗೆ ಬರಬೇಕು ಎನ್ನುವಷ್ಟರಲ್ಲಿ ನಟ ಶ್ರೀಮುರುಳಿಗೆ ಪೆಟ್ಟಾಗಿದೆ. ಶೂಟಿಂಗ್ ವೇಳೆ ಕಾಲಿಗೆ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ವೈದ್ಯರು ನಟ ಶ್ರೀಮುರುಳಿ ಕಂಡೀಷನ್ ಬಗ್ಗೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದಾರೆ.

ಮೊಣಕಾಲಿಗೆ ಗಂಭೀರ ಗಾಯವಾಗಿದ್ದ ಕಾರಣ ಇಂದು ಮಧ್ಯಾಹ್ನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಉಳಿಯಬೇಕಾಗಿದೆ. ಜೊತೆಗೆ ಡಿಸ್ಚಾರ್ಜ್ ಆದ ಬಳಿಕವೂ ಹೆಚ್ಚು ಓಡಾಡುವಂತಿಲ್ಲ ಎಂದು ನಟ ಶ್ರೀಮುರುಳಿಗೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ‌. ಸುಮಾರು ಆರು ತಿಂಗಳುಗಳ ಕಾಲ ಡ್ಯಾನ್ಸ್, ಫೈಟ್ ಮಾಡಂಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks