
ಬೆಂಗಳೂರು: ಫೈಟ್ ದೃಶ್ಯಗಳನ್ನ ತೆರೆ ಮೇಲೆ ನೋಡುವಾಗ ವಾವ್ ಅಂತ ಖುಷಿ ಪಟ್ಟು, ಶಿಳ್ಳೆ, ಚಪ್ಪಾಳೆ ಹೊಡೆಯುತ್ತೀವಿ. ಆದರೆ ಅದರ ಹಿಂದಿನ ಸಾಕಷ್ಟು ಶ್ರಮ ಕಾಣೋದಿಲ್ಲ. ಅದೆಷ್ಟೋ ಜನರಿಗೆ ಮೈಕೈಗೆ ಪೆಟ್ಟಾಗಿರುತ್ತದೆ. ಇದೆಲ್ಲವನ್ನು ಹೇಳುವುದಕ್ಕೆ ಕಾರಣ ಇಂದು ನಟ ಶ್ರೀಮುರುಳಿಗೆ ಶೂಟಿಂಗ್ ವೇಳೆ ಪೆಟ್ಟಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿದೆ.

ಹೊಂಬಾಳೆ ಬ್ಯಾನರ್ ನಲ್ಲಿ ನಟ ಶ್ರೀಮುರುಳಿ ಬಘೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಮದಗಜ ಸಿನಿಮಾ ಬಳಿಕ ಶ್ರೀಮುರುಳಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಇನ್ನೆರಡು ದಿನದಲ್ಲಿ ಶೂಟಿಂಗ್ ಮುಕ್ತಾಯವಾಗುತ್ತಿತ್ತು.
ಕಳೆದ ಬಾರಿ ಅಂದ್ರೆ ಮದಗಜ ಸಿನಿಮಾ ಮಾಡುವಾಗ ಶ್ರೀಮುರುಳಿ ಕಾಲಿಗೆ ಪೆಟ್ಟಾಗಿತ್ತು. ಆಗ ಚಿಕಿತ್ಸೆ ಪಡೆದಿದ್ದರು. ಆದರೆ ಬಘೀರ ಶೂಟಿಂಗ್ ಸಮಯದಲ್ಲೂ ನಟ ಶ್ರೀಮುರುಳಿಗೆ ಅದೇ ಕಾಲಿಗೆ ಪೆಟ್ಟಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈಗ ರೆಸ್ಟ್ ನಲ್ಲಿದ್ದು, ಮತ್ತೆ ಶೂಟಿಂಗ್ ಯಾವಾಗ ಹೋಗುತ್ತಾರೆ ಎಂಬ ಅಪ್ಡೇಟ್ ಇನ್ನು ಸಿಗಬೇಕಿದೆ.
GIPHY App Key not set. Please check settings