ನಟ ಪುನೀತ್ ರಾಜ್‍ಕುಮಾರ್ 2ನೇ ಪುಣ್ಯಸ್ಮರಣೆ : ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

suddionenews
1 Min Read

 

ಬೆಂಗಳೂರು: ಇಂದು ಅಪ್ಪು ಎರಡನೇ ವರ್ಷದ ಪುಣ್ಯಸ್ಮರಣೆ. ಅವರು ಭೌತಿಕವಾಗಿ ನಮ್ಮ‌ ನಡುವೆ ಇಲ್ಲದಂತೆ ಆಗಿ ಎರಡು ವರ್ಷಗಳು ಕಳೆದಿವೆ. ಇದರ ನಡುವೆ ಕರ್ನಾಟಕ ರತ್ನವನ್ನು ನೆನೆಯದ ದಿನವಿಲ್ಲ. ವಿಧಿಯನ್ನು ಶಪಿಸದ ಸಮಯವಿಲ್ಲ. ಇಂದು ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲಾಗಿದೆ.

ಅಪ್ಪು ಸಮಾಧಿ ಹೂವುಗಳಿಂದ ಅಲಂಕಾರಗೊಂಡಿದೆ. ಲೈಟುಗಳಿಂದ ಕಂಗೊಳಿಸುತ್ತಿದೆ. ಬೆಳಗ್ಗೆಯೇ ಮನೆಯವರೆಲ್ಲ ಸೇರಿ, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪುಗೆ ಇಷ್ಟವಾದ ತಿನಿಸುಗಳನ್ನೆಲ್ಲಾ ಸಮಾಧಿ‌ವಮುಂದೆ‌ ಇಟ್ಟು ಪೂಜೆ ಸಲ್ಲಿಸಲಾಗಿದೆ. ಕುಟುಂಬಸ್ಥರೆಲ್ಲಾ ಸೇರಿ, ಪೂಜೆ ಮಾಡಿದ್ದಾರೆ.

ಇನ್ನೂ ಸಮಾಧಿ ಬಳಿ ಅಭಿಮಾನಿಗಳ ದಂಡು ಹರಿದು ಬಂದಿದೆ. ಜಿಲ್ಲೆಯ ನಾನಾ ಭಾಗಗಳಿಂದಾನೂ ಅಭಿಮಾನಿಗಳು ಬಂದಿದ್ದಾರೆ. ಅಪ್ಪುಗಾಗಿ ತಿನಿಸು, ಹೂಗಳನ್ನು ತಂದು, ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟನಿಗೆ ನಮಸ್ಕರಿಸಿದ್ದಾರೆ.

ಅಂದು 2021 ಅಕ್ಟೋಬರ್ 29 ರಾಜ್ಯಾದ್ಯಂತ ಭಜರಂಗಿ2 ಸಿನಿಮಾ ತೆರೆಗೆ ಬಂದಿತ್ತು. ಅದಕ್ಕೂ ಮುನ್ನ ಭಜರಂಗಿ 2 ಸಿನಿಮಾ ಇವೆಂಟ್ ನಲ್ಲಿ ಅಣ್ಣನ ಜೊತೆ ಸೇರಿ, ಅಪ್ಪು ಕೂಡ ಕುಣಿದು ಕುಪ್ಪಳಿಸಿದ್ದರು. ಆದರೆ ಸಿನಿಮಾ ಶುರುವಾಗಿ ಒಂದು ಗಂಟೆಯಾಗಿತ್ತಷ್ಟೆ, ಅಪ್ಪು ಆಸ್ಪತ್ರೆ ಸೇರಿದ ವಿಚಾರ ಬಂದಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲರನ್ನು ಅಗಲಿದ್ದರು. ಮೂರು ದಿನಗಳ ಕಾಲ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಹಗಲು – ರಾತ್ರಿ ಅಭಿಮಾನಿಗಳ ಜನ ಸಾಗರವೇ ಅಂತಿಮ ದರ್ಶನಕ್ಕೆ ನೆಲೆಸಿತ್ತು. ಇಡೀ ಕರ್ನಾಟಕ ಕಣ್ಣೀರಾಗಿತ್ತು. ಇಂದು ಆ ಕರಾಳ ದಿನಕ್ಕೆ ಎರಡು ವರ್ಷ ಅಭಿಮಾನಿಗಳ ಕಣ್ಣೀರು ಈಗಲು ಬತ್ತಿಲ್ಲ. ಆದರೆ ಅವರ ನೆನಪಿನೊಂದಿಗೆ ಅಪ್ಪುರನ್ನು ಸೆಲೆಬ್ರೇಟ್ ಮಾಡುತ್ತಾ ಕಾಲ ದೂಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *