ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಜೋರು ಮಳೆಯಾಗಿದೆ. ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಮರಗಿಡಗಳು ಬಿದ್ದು, ವಾಹನಗಳು ಜಖಂ ಆಗಿದೆ. ರಸ್ತೆಗಳೆಲ್ಲಾ ನೀರು ತುಂಬಿದೆ. ಕಾರು ಮುಳುಗಡೆಯಾಗಿ, ಒಬ್ಬ ಮಹಿಳೆ ಸಾವನ್ನಪ್ಪಿರುವ ಘಟನೆಯೂ ನಿನ್ನೆ ನಡೆದಿದೆ.
ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು..5hp motor ಬಳಸಿ ನೀರು ಹೊರಹಾಕಿಸಲಾಯಿತು..
ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ.. pic.twitter.com/eZ2G2cYQWS— ನವರಸನಾಯಕ ಜಗ್ಗೇಶ್ (@Jaggesh2) May 21, 2023
ಸಿಲಿಕಾನ್ ಸಿಟಿಯಲ್ಲಿ ಮಳೆ ಬಿದ್ದ ಪರಿಣಾಮ ಅವಾಂತರ ಸೃಷ್ಟಿಯಾಗಿರುವುದು ಒಳದೆರಡಲ್ಲ. ಇದೀಗ ನಟ ಜಗ್ಗೇಶ್ ಅವರಿಗೂ ಮಳೆಯಿಂದ ಸಮಸ್ಯೆ ಉಂಟಾಗಿದೆ. ಅವರ ಕಾರೊಂದು ನೀರಲ್ಲಿ ಮುಳುಗಡೆಯಾಗಿದೆ. ಆ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
“ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು..5hp motor ಬಳಸಿ ನೀರು ಹೊರಹಾಕಿಸಲಾಯಿತು.. ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ” ಎಂದು ಟ್ಚೀಟ್ ಮಾಡಿದ್ದಾರೆ.





GIPHY App Key not set. Please check settings