ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಏಳು ತಿಂಗಳ ಬಳಿಕ ಷರತ್ತು ಬದ್ಧ ಜಾಮೀನು ಪಡೆದಿದ್ದ ದರ್ಶನ್ ಅವರಿಗೆ ಈಗ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸ್ವತಂತ್ರ ಹಕ್ಕಿಯಾಗಿದ್ದಾರೆ. ಷರತ್ತು ಬದ್ಧ ಜಾಮೀನು ನೀಡಿದ್ದ ಕಾರಣ ಎಲ್ಲಿ ಹೋಗುವುದಕ್ಕೂ ಅನುಮತಿ ಇರಲಿಲ್ಲ. ಆದರೆ ಇದೀಗ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ನಿಯಮಗಳನ್ನ ಸಡಿಲಿಸಿದೆ. ಈಗ ಎಲ್ಲಿ ಬೇಕಾದರೂ ಕೋರ್ಟ್ ಅನುಮತಿ ಇಲ್ಲದೆ ತೆರಳಬಹುದಾಗಿದೆ. ಆದರೆ ವಿದೇಶಕ್ಕೆ ಹೋಗುವಾಗ ಅನುಮತಿ ಬೇಕೇ ಬೇಕಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಈ ಕುರಿತು ಆದೇಶ ನೀಡಿದ್ದು, ದರ್ಶನ್ ಬೆಂಗಳೂರು ಬಿಟ್ಟು ಹೋಗುವಾಗ ಇದ್ದಂತ ಷರತ್ತನ್ನು ಸಡಿಲಿಕೆ ಮಾಡಿದೆ. ಕೋರ್ಟ್ ವ್ಯಾಪ್ತಿ ಬಿಟ್ಟು ಎಲ್ಲಿಯೇ ಹೋಗಬೇಕು ಎಂದರು ಕೋರ್ಟ್ ಅನುಮತಿಯನ್ನು ಪಡೆಯಬೇಕಾಗಿತ್ತು. ಮೈಸೂರಿನ ತೋಟದ ಮನೆಗೆ ಹೋಗುವಾಗಲೂ ಕೋರ್ಟ್ ಅನುಮತಿ ಕೇಳಬೇಕಾಗಿತ್ತು. ಇದೀಗ ಆ ನಿಯಮವನ್ನು ಸಡಿಲಗೊಳಿಸಿದೆ.

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಕಾರಣ, ದರ್ಶನ್ ಅಂಡ್ ಟೀಂ ರೇಣುಕಾಸ್ವಾಮಿಯನ್ನು ಕರೆಸಿ ಎಚ್ಚರಿಕೆ ನೀಡಲು ಮುಂದಾಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆಯಾದ ಬಳಿಕ ಸಿನಿಮಾ ಸ್ಟೈಲ್ ನಲ್ಲಿ ಮೋರಿಗೆ ಎಸೆಯಲು ಹೋಗಿ ತಗಲಾಕಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆ ಆರೋಪ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹದಿನೇಳು ಜನರ ಮೇಲಿತ್ತು. ಹದಿನೇಳು ಮಂದಿ ಜೈಲಿಗೂ ಹೋಗಿ ಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದಿದ್ದು, ಕೋರ್ಟ್ ಕೇಸ್ ಇದ್ದಾಗ ಅಟೆಂಡ್ ಕೂಡ ಮಾಡುತ್ತಿದ್ದಾರೆ. ಇದೀಗ ದರ್ಶನ್ ಗೆ ಷರತ್ತನ್ನು ಸಡಿಲಿಸಿದೆ. ಹಾಗೇ ಮೊನ್ನೆಯಷ್ಟೇ ಪವಿತ್ರಾ ಗೌಡಗೂ ಷರತ್ತು ಸಡಿಲಿಕೆ ಮಾಡಿತ್ತು ಕೋರ್ಟ್.


