ಕೆಲವೊಂದಿಷ್ಟು ವಿವಾದಗಳ ನಡುವೆ ನಟ ದರ್ಶನ್ ವೈಯಕ್ತಿಕ ಜೀವನದ ಕಡೆಗೂ ಗಮನ ಕೊಟ್ಟಿದ್ದಾರೆ. ಕಾಟೇರ ಸಕ್ಸಸ್ ಆದ ಬಳಿಕ ಸಕ್ಸಸ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಇದೀಗ ಪಾರ್ಟಿಯೊಂದರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ, ಹಾಕಿ ಸಖತ್ ಖುಷಿ ಪಡುತ್ತಿದ್ದಾರೆ.

https://youtu.be/-PWWa88w_ms?si=c2XH6b27DrD9sUKG

ದರ್ಶನದ ಹಾಗೂ ತರುಣ್ ಸುದೀರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಕಾಟೇರ ಸಿನಿಮಾ 50 ದಿನಗಳ ಸಕ್ಸಸ್ ಅಲೆಯಲ್ಲಿ ತೇಲುತ್ತಾ ಇದೆ. ಈಗಾಗಲೇ ಆ ಸಂಭ್ರಮದ ದಿನವನ್ನು ಆಚರಣೆ ಮಾಡಿದ್ದಾರೆ. ದರ್ಶನ್ ಇದೇ ಸಮಯಕ್ಕೆ ಇಂಡಸ್ಟ್ರಿಗೆ ಬಂದು 25 ವರ್ಷಗಳು ತುಂಬಿವೆ. ಇದಕ್ಕಾಗಿ ಈಗಾಗಲೇ ಡಿ 25 ಸೆಲೆಬ್ರೇಷನ್ ಕೂಡ ಮಾಡಲಾಗಿದೆ. ಅದರ ಜೊತೆಗೆ ಬರ್ತ್ ಡೇ ಕೂಡ ಇದೇ ಸಂದರ್ಭದಲ್ಲಿ ಆಚರಣೆ ಮಾಡಿಕೊಳ್ಳಲಾಗಿದೆ.
ಈ ಮೂರು ಒಟ್ಟಿಗೆ ಬಂದಿರುವ ಕಾರಣ ದರ್ಶನ್ ಅವರಿಗೆ ಸ್ನೇಹಿತರೆಲ್ಲಾ ಸೇರಿ ಒಂದೊಳ್ಳೆ ಪಾರ್ಟಿ ಕೊಟ್ಟಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ಪಾರ್ಟಿ ಅರೆಂಜ್ ಮಾಡಲಾಗಿದ್ದು, ದರ್ಶನ್ ಹಾಗೂ ಪತ್ನಿ ಭಾಗಿಯಾಗಿದ್ದರು. ಈ ವೇಳೆ ದಾಸ ತನ್ನ ಪತ್ನಿಯೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. 3 ಇಡಿಯಟ್ ಸಿನಿಮಾದ ಹಾಡಿಗೆ ಕುಣಿದಿದ್ದಾರೆ. ಅತ್ತಿಗೆಯೊಂದಿಗೆ ಹೆಜ್ಜೆ ಹಾಕಿದ್ದಕ್ಕೆ ದಚ್ಚು ಫ್ಯಾನ್ಸ್ ಸಂತಸ ಮುಗಿಲು ಮುಟ್ಟಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ನಡೆದ ಕೆಲವೊಂದು ವಿವಾದಗಳ ನಡುವೆ ಇಂಥದ್ದೊಂದು ಸಂತಸದ ಸನ್ನಿವೇಶವನ್ನು ದರ್ಶನ್ ಸೃಷ್ಟಿ ಮಾಡಿದ್ದಾರೆ.

