ಚಿತ್ರದುರ್ಗ, (ಜ.07) : ದಕ್ಕಲಿಗ ಸಮುದಾಯವರಿಗೆ ಸರಿಯಾಗಿ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂಬ ಕೂಗು ಇದೆ. ಇದನ್ನು ಶೀಘ್ರವಾಗಿ ದಕ್ಕಲಿಗ ಜನಾಂಗಕ್ಕೆ ಜಾತಿಪ್ರಮಾಣ ಪತ್ರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ರವರು ಭರವಸೆ ನೀಡಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾದರ ಚನ್ನಯ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಮುಖಂಡರಾದ ಹನುಮಂತಪ್ಪ ರವರ ನೇತೃತ್ವದಲ್ಲಿ “ದಕ್ಕಲಿಗ ಸಮುದಾಯದ ಆಶೋತ್ತರಗಳು, ಕುಂದುಕೊರತೆಗಳು ಮತ್ತು ಅಭಿವೃದ್ಧಿಯ ಕುರಿತು ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಾದಿಗ ಜನಾಂಗದ (ಜಾಂಬವ) ಹುಟ್ಟಿನ ಬಗ್ಗೆ ತಿಳಿದವರು ದಕ್ಕಲಿಗ ಸಮುದಾಯದವರು. ಅದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ದಕ್ಕಲಿಗ ಸಮುದಾಯವು ಸಹ ಬರುತ್ತದೆ. ನಿಗಮದಿಂದ ಸವಲತ್ತುನ್ನು ನೀವು ಪಡೆಯಬೇಕು.ದಕ್ಕಲಿಗ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ, ದಕ್ಕಲಿಗರೆಂದರೆ ಬೇರೆ ಯಾರು ಅಲ್ಲ ಅವರು ಸಹ ಮಾದಿಗರು, ಇಬ್ಬರು ಒಂದೇ ಜಾತಿ. ವಿಶ್ವಗುರು ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು. ಮಾದಿಗರೇ ಅಸ್ಪಶ್ಯರು ಆದರೆ ದಕ್ಕಲಿಗರು ಮಾದಿಗರಿಗೆ ಅಸ್ಪಷ್ಯರು ಈ ವ್ಯವಸ್ಥೆ ತೊಡಗಬೇಕು.ಇವರು ಮಾದಿಗ ಕೇರಿಗಳಲ್ಲಿ ಅಲೆದಾಡಿ ಭಿಕ್ಷೆ ಬೇಡಿ ಜೀವನ ನಡೆಸುವ ಜನಾಂಗವಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 481 ದಕ್ಕಲಿಗ ಕುಟುಂಬಗಳಿವೆ ಇವು ಹರಿದು ಹಂಚಿ ಹೋಗಿವೆ ನೀವು ಒಂದು ಕಡೆ ಬನ್ನಿ ನಾನೇ 100 ಎಕರೆ ಜಮೀನು ನೀಡುತ್ತೇನೆ. ಸರ್ಕಾರಿ ಹುದ್ದೆಗೆ ಸ್ಪರ್ಧೆ ಜಾಸ್ತಿಯಿದೆ ಆದರೆ ಸ್ವಯಂ ಉದ್ಯೋಗಕ್ಕೆ ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ರವರು ಸೇರಿದಂತೆ ಇತರರು ಭಾಗವಹಿಸಿದ್ದರು.
ಮಾದಾರ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.