ನಮ್ಮ ಧ್ವಜ.. ನಮ್ಮ ಮಾನ, ಪ್ರಾಣ : ಕನ್ನಡ ಧ್ವಜ ಸುಟ್ಟ ವಿಕೃತಿಗಳ ವಿರುದ್ಧ ನಿಂತ ಸ್ಯಾಂಡಲ್ ವುಡ್

suddionenews
1 Min Read

ಬೆಂಗಳೂರು: ಮಹಾರಾಷ್ಟ್ರದಲ್ಲಿ ಶಿವಸೇನೆ ಕನ್ನಡ ಧ್ವಜವನ್ನು ಸುಟ್ಟು ವಿಕೃತಿ ಮೆರೆದಿದೆ. ಇದರಿಂದ ಕನ್ನಡಿಗರ ಕೋಪ ನೆತ್ತಿಗೇರುವಂತೆ ಮಾಡಿದೆ. ಈಗಾಗಲೇ ಆ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಆಗಲೇಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಲಾಗಿದೆ. ಇದೀಗ ಸ್ಯಾಂಡಲ್ ವುಡ್ ಕೂಡ ಈ ವಿಚಾರವಾಗಿ ಧ್ವನಿಗೂಡಿಸಿದೆ.

ಕನ್ನಡ ಧ್ವಜ ಸುಟ್ಟ ವಿಚಾರ ಗೊತ್ತಾದಾಗಲೇ ಡಾ.ಶಿವರಾಜ್ ಕುಮಾರ್ ಅದನ್ನ ವಿರೋಧಿಸಿದ್ದಾರೆ. ಕನ್ನಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಜವಾದ ಕನ್ನಡುಗರನ್ನ ಬಿಡುಗಡೆಗೊಳಿಸಿ ಎಂದು ಅಣ್ಣಾವ್ರು ಬಾವುಟ ಹಿಡಿದುಕೊಂಡಿರುವ ಫೋಟೋವನ್ನ ಶೇರ್ ಮಾಡಿದ್ದಾರೆ.

ನಾಡು ನುಡಿ ನಮ್ಮ ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನ ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸಲ್ಲ. ನಾಡಧ್ವಜ ಸುಟ್ಟವರನ್ನ ಬಂಧಿಸಿ,‌ಕನ್ನಡ ಪರ ಹೋರಾಟಗಾರರನ್ನ ಬಿಡುಗಡೆಗೊಳಿಸಿ ಎಂದು ದುನಿಯಾ ವಿಜಯ್ ಒತ್ತಾಯಿಸಿದ್ದಾರೆ.

ಭಾಷೆ ಅನ್ನೋದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ.ಕನ್ನಡಧ್ವಜ ನಮ್ಮ ಸಂಸ್ಕೃತಿಯ ತಿಲಕ.
ಕನ್ನಡಧ್ವಜ ವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ!
ಸರ್ಕಾರ ಈಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕೆನ್ನುವುದು ನನ್ನಂತ ಕೋಟ್ಯಾಂತರ ಕನ್ನಡಿಗರ ಒತ್ತಯ ಜೈಆಂಜನೇಯ ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಅನ್ನೋದು ನೆನಪಿರಲಿ. ನಮ್ಮ ಧ್ವಜ ನಮ್ಮ ಮಾನ ಪ್ರಾಣ. ಬೆಳಕು ಕೊಡುವ ಬಾವುಟಕ್ಕೆ ಬೆಂಕಿ ಇಟ್ಟವರನ್ನು ಶಿಕ್ಷಿಸಿ. ನಮ್ಮ ಧ್ವಜ ಹಿಡಿದ ಭುಜಗಳನ್ನು ರಕ್ಷಿಸಿ ಎಂದು ಹಂಸಲೇಕ ಅವರು ಹೇಳಿದ್ದಾರೆ. ನಟ ಜಗ್ಗೇಶ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವರು ಕನ್ನಡ ಧ್ವಜ ಸುಟ್ಟವರ ಶಿಕ್ಷೆಗೆ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *