ಆಕಾಶದೆತ್ತರದ ಅಂಬೇಡ್ಕರ್ ಗೆ ವಿಶ್ವ ದಾಖಲೆಯ ಮನ್ನಣೆ…!

 

ಹೈದರಾಬಾದ್, ಏಪ್ರಿಲ್ 15 :  ನಗರದ ಹೃದಯಭಾಗದಲ್ಲಿ 125 ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿದ ತೆಲಂಗಾಣ ಸರ್ಕಾರ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸಿದೆ.

ಈ ಪ್ರತಿಮೆಯನ್ನು ಹೈರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದ್ದು, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪರವಾಗಿ ಸಚಿವ ಕೊಪ್ಪುಳ ಈಶ್ವರ್ ಅವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.

ಅಂಬೇಡ್ಕರ್ ಪ್ರತಿಮೆ ಹೈರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ಸಚಿವ ಈಶ್ವರ್ ಅವರು ಸರ್ಕಾರದ ಸಾಧನೆಯನ್ನು  ಶ್ಲಾಘಿಸಿದರು. ವಿದೇಶದಲ್ಲಿರುವ ಭಾರತೀಯರು ವಿವಿಧ ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಮೆ ಪ್ರವಾಸಿ ಆಕರ್ಷಣೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಸ್‌ಸಿ ನಿಗಮದ ಅಧ್ಯಕ್ಷ ಬಂಡಾ ಶ್ರೀನಿವಾಸ್, ಸಂಖ್ಯಾಶಾಸ್ತ್ರಜ್ಞ ದೈವಜ್ಞ ಶರ್ಮಾ, ಜಗಿತಾಲ್ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಹರಿಚರಣ್, ಹೈರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿರ್ದೇಶಕರಾದ ಶ್ರೀಕಾಂತ್ ಮತ್ತು ಸುಮನ್ ಪಲ್ಲೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *