ಸಾಧನೆ ಮಾಡಿದವರು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ : ಶ್ಯಾಮ್ ಮಸುಳೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.05) :  ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ ಅದನ್ನು ಹೊರ ತೆಗೆಯುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕಿದೆ, ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ ಎಂದು ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷರಾದ ಶ್ಯಾಮ್ ಮಸುಳೆ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಮಕ್ಕಳೆಲ್ಲಾ ಬುದ್ದಿವಂತರೇ ಅವರ ಪ್ರತಿಭೆಯನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಗುರುತಿಸುವ ಕಾರ್ಯವನ್ನು ಮಾಡಬೇಕಿದೆ. ಇದರಿಂದ ಅವರ ಪ್ರತಿಭೆ ಮತ್ತಷ್ಠು ಬೆಳೆಯಲು ಸಾಧ್ಯವಿದೆ ಎಂದರು.

ಇಂದಿನ ದಿನಮಾನ ಸ್ಫರ್ಧಾ ಯುಗವಾಗಿದೆ. ಇಲ್ಲಿ ಎಲ್ಲಾ ಕಡೆಯಲ್ಲಿಯೂ ಸಹಾ ಸ್ಫರ್ದೆ ಎಂಬುದು ಇದೆ. ಇದರಿಂದ ಉತ್ತಮವಾದ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಪಡೆದ ಶಿಕ್ಷಣವನ್ನು ಮುಂದಿನ ದಿನದಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿಕೊಳ್ಳಬೇಕಿದೆ, ಕೆಲಸವನ್ನು ಪಡೆಯುವುದರ ಮೂಲಕ ಸಮಾಜಕ್ಕೆ ಸೇವೆಯನ್ನು ಮಾಡಬೇಕಿದೆ. ಪ್ರತಿಭೆ ಎನ್ನುವುದು ಯಾರ ಸ್ವತ್ತು ಅಲ್ಲ ಅದು ಸಾಧಕನ ಸೊತ್ತಾಗಿದೆ ಯಾರು ಸಾಧನೆಯನ್ನು ಮಾಡುತ್ತಾರೆ ಅವರು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ಶ್ಯಾಮ ತಿಳಿಸಿದರು.

ಇದೇ ಸಂದರ್ಭದಲ್ಲಿ 2022ರ ಸಾಲಿನಲ್ಲಿ ಪದವಿ ಪರೀಕ್ಷೆಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಸ್ಪೂರ್ತಿ ಎಸ್ ಬೇದ್ರೆ, ಹರಿ ಆರ್ ಬೇದ್ರೆ, ಸಾಯಿಪ್ರಿಯ ಎಸ್.ಗುಜ್ಜರ್, ಪಿಯುಸಿನಲ್ಲಿ ಕುಷಾಲ್ ಆರ್ ಅಂಬೇಕರ್ ಹಾಗೂ ಸಂಜನಾ ಜಿ.ಎಸ್. ಗುಜ್ಜರ್ ಸೇರಿದಂತೆ ಎಸ್.ಎಸ್.ಎಲ್.ಸಿ,ಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ನೀಡುವ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಮಾಜದ ನಿರ್ದೇಶಕರಾದ ನಾಗರಾಜ್ ಬೇದ್ರೇಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷರಾದ ಸಂತೋಷ್‍ಬಾಬು ಮಹಳತ್ಕರ್, ಕಾರ್ಯದರ್ಶಿ ಬಿ.ಎಸ್.ನಾಗರಾಜ್, ಸಹ ಕಾರ್ಯದರ್ಶಿ ಕೃಷ್ಣ ಪಟಿಗೆ, ಖಜಾಂಚಿ ಜಯರಾಮರಾವ್ ಗುಜ್ಜರ್ ಸೇರಿದಂತೆ ಸಮಾಜದ ನಿರ್ದೇಶಕರುಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *