ಆದ್ಯಾ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಸಾಧನೆ: 43 ಜನರಿಗೆ ಯುನಿವರ್ಸಿಟಿ ರ್ಯಾಂಕ್

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07 : ನವೆಂಬರ್,2025 ರಲ್ಲಿ ನಡೆದ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಚಿತ್ರದುರ್ಗದ ಆದ್ಯಾ ಕಾಲೇಜ್ ಆಫ್ ಫಾರ್ಮಸಿ
ಬಿ.ಫಾರ್ಮ್ 1 ನೇ ವರ್ಷದಿಂದ ನಾಲ್ಕನೆ ವರ್ಷದವರೆಗೆ ಒಟ್ಟು 240 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಶ್ರೇಣಿ ರ್ಯಾಂಕ್‍ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುವುದಕ್ಕೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಚಂದ್ರಕಲಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಇವರುಗಳು ಅಭಿನಂದಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮುತಾಹರ್ ಹಾಗೂ ಪ್ರಾಧ್ಯಾಪಕರ ಕಠಿಣ ಪರಿಶ್ರಮವಿದೆ ಎಂದು ಡಾ.ಎಂ.ಚಂದ್ರಪ್ಪ, ಚಂದ್ರಕಲಾ ಹಾಗೂ ಎಂ.ಸಿ.ರಘುಚಂದ್‍ನ್ ಇವರುಗಳು ಪ್ರಶಂಶಿಸಿದ್ದಾರೆ.

Share This Article