200 ರೂಪಾಯಿ ಲಂಚದ ಆರೋಪ.. ಸತ್ತು 3 ವರ್ಷದ ಬಳಿಕ ನ್ಯಾಯ : ಮೈಸೂರಿನ ಮಹಿಳಾ ಅಧಿಕಾರಿಯ ಕಥೆ..ವ್ಯಥೆ..!

1 Min Read

ಮೈಸೂರು: ಪ್ರಾಮಾಣಿಕ ಅಧಿಕಾರಿ‌ ಮಾಲಿನಿ ಅವರ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ಆದರೆ ಅವರೇ ಬದುಕಿಲ್ಲ. ಅವರು ಸತ್ತ ಮೂರು ವರ್ಷದ ಬಳಿಕ ಅವರಿಗೆ ಬರಬೇಕಾದ ಬಾಕಿ ಹಣ ಬಿಡುಗಡೆಯಾಗಿರುವುದು ಮಾತ್ರ ವಿಪರ್ಯಾಸ. ಏನು ತಪ್ಪೇ ಮಾಡದ ಮಾಲಿನಿ ಮೇಲೆ 200 ರೂಪಾಯಿ ಲಂಚದ ಆರೋಪ ಕೇಳಿ ಬಂದಿತ್ತು. ಇದರಿಂದ ಸತತ 17 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಂತ ಮಹಿಳಾ ಅಧಿಕಾರಿ ಇವರು.

ಮಾಲಿನಿ ಮೈಸೂರಿನ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜರ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2007ರ ಸಮಯ. ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ನಿಯಮಾನುಸಾರ ಅರ್ಜಿ ತಿರಸ್ಕರಿಸಲಾಗಿತ್ತು. ಬಳಿಕ ಲೋಕಾಯುಕ್ತ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಈ ಪ್ರಕರಣ ತೀವ್ರತೆಯನ್ನು ಪಡೆದುಕೊಂಡಿತ್ತು. ಆ ಲಂಚವನ್ನು ಸ್ವೀಕರಿಸಿದ್ದವರು ಬೇರೆಯವರಾಗಿದ್ದರು. ಆದರೆ ತನಿಖೆಯಲ್ಲಿ ಮಾಲಿನಿ ಅವರನ್ನು ಸಹ ಆರೋಪಿಯಾಗಿ ಸೇರಿಸಲಾಗಿತ್ತು.

ಈ ಬೆಳವಣಿಗೆಯ ನಡುವೆ ಅವರನ್ನು 2007ರಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ಸ್ಥಳೀಯ ಕೋರ್ಟ್ ಕೂಡ ಅವರನ್ನು ಅಪರಾಧಿ ಎಂದೇ ಘೋಷಣೆ‌ ಮಾಡಿತ್ತು. ಸಾಕಷ್ಟು ವರ್ಷಗಳು ತಾವೂ ನಿರಪರಾಧಿ ಅಂತ ಪ್ರೂವ್ ಮಾಡಿಕೊಳ್ಳುವುದಕ್ಕೆ ಹೋರಾಟಗಳು ನಡೆದಿದ್ದವು. 2012ರಲ್ಲಿ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಮಾಲಿನಿ ವಿರುದ್ಧ ಯಾವುದೇ ಪುರಾವೆಗಳಿರಲಿಲ್ಲ. ಆದರೆ ಇದರಿಂದ ಮಾನಸಿಕವಾಗಿ‌ ನೊಂದಿದ್ದ ಮಾಲಿನಿ, ಅನಾರೋಗ್ಯಕ್ಕೀಡಾದರೂ. 2023ರಲ್ಲಿ ನಿಧನರಾದರು. ಇದೀಗ ಅವರಿಗೆ ಸಲ್ಲಬೇಕಾದ ಭತ್ಯೆಗಳು ಮೂರು ವರ್ಷವಾದ ಬಳಿಕ ಸಿಕ್ಕಿದೆ.

Share This Article
Enable Notifications OK No thanks