ಬೆಂಗಳೂರು: ಪೋಷಕ ಕಾಲವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದು ನಿಂತಿದೆ. ಸಂಘದ ಅಧ್ಯಕ್ಷರಾಗಿರುವ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಒಂದು ಕೇಳಿ ಬಂದಿದೆ. ಹಿರಿಯ ನಟಿ ರೇಖಾ ರಾಣಿ, ಸಂಘದಲ್ಲಿ ಹಣಕಾಸಿನ ಅವ್ಯವಹಾರ ನಡೆಯುತ್ತಿದೆ. ಜೊತೆಗೆ ಆಡುಗೋಡಿ ಶ್ರೀನಿವಾಸ್ ಮಹಿಳೆಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದೀಗ ಆ ಆರೋಪಕ್ಕೆ ಸಂಘದ ಅಧ್ಯಕ್ಷ, ಹಿರಿಯ ನಟ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ರಾಣಿ ಮಾಡುತ್ತಿರುವ ಆರೋಪ ನಿರಾಧಾರವಾಗಿಸಂಘದ ಆವರಣದಲ್ಲಿ ಅವರು ವೈಯಕ್ತಿಕ ಗಲಾಟೆ ಶುರು ಮಾಡಿದ್ದರು. ಹಾಗಾಗಿ ಅವರನ್ನು ಸಂಘದಿಂದ ಹೊರ ಹಾಕಿದ್ದೆವು. ಈಗ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದನ್ನು ತಪ್ಪಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ನಾವೂ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದಿದ್ದಾರೆ.

ನಟಿ ರಾಣಿ ಮಾಡಿದ ಆರೋಪ ಹೀಗಿದೆ : ಮಹಿಳೆಯರನ್ನು ಅಗೌರವದಿಂದ ಕಾಣುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿರುವಂತ ಮಹಿಳೆಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

