ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಹೃದಯ ಭಾಗದಲ್ಲಿರುವ ಬಿ.ಡಿ. ರಸ್ತೆಯ ಎಸ್.ಬಿ.ಐ. ಬ್ಯಾಂಕ್ ಸಮೀಪ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಫೋಟೋ ಫ್ರೇಂ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಭಾನುವಾರ) ರಾತ್ರಿ 8: 30 ರ ಸುಮಾರಿಗೆ ನಡೆದಿದೆ. ಅಂಗಡಿ ಸಂಪೂರ್ಣ ಹೊತ್ತಿ ಉರಿದು ಬೆಂಕಿಯ ಕೆನ್ನಾಲಿಗೆ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೂ ಆವರಿಸಿದ್ದು ಅದರಲ್ಲಿ ಇದ್ದ ಪೀಠೋಪಕರಣಗಳು ಸುಟ್ಟುಕರಕಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದಿದ್ದು ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


