ನೆಲಮಂಗಲ: ಇನ್ನೊಂದು ಹತ್ತು ದಿನ ಕಳೆದಿದ್ದರೆ ಎಂಟು ತಿಂಗಳು ತುಂಬಿ ಒಂಭತ್ತಕ್ಕೆ ಬೀಳುತ್ತಿತ್ತು. ಹೆರಿಗೆಯೂ ಸುಸೂತ್ರವಾಗಿ ಮಗುವನ್ನ ಮನೆಯವರೆಲ್ಲ ಎತ್ತಿ ಆಡಿಸುತ್ತಿದ್ದರು. ಆದರೆ ವಿಧಿಯ ಲೀಲೆ ಅದಾಗಿರಲಿಲ್ಲ. ಗರ್ಭಿಣಿ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಆ ಹೆಣ್ಣು ಮಗು ಸ್ಥಳದಲ್ಲೊಯೇ ಸಾವನ್ನಪ್ಪಿದೆ. ಅಪಘಾತದ ರಭಸಕ್ಕೆ ಹಿಟ್ಟೆಯಲ್ಲಿದ್ದ ಮಗು ಕುಇಡ ಹೊರಗೆ ಬಂದಿದೆ. ಆದರೆ ಕಾಪಾಡುವವರಿಲ್ಲದೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದೆ. ಈ ಕರುಳು ಕಿತ್ತುಬರುವ ಘಟನೆ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ.
30 ವರ್ಷದ ಸಿಂಚನಾ ಮೃತ ಮಹಿಳೆ. ಆಗಸ್ಟ್ 17ಕ್ಕೆ ಎಂಟು ತಿಂಗಳು ತುಂಬುತ್ತಿತ್ತು. ಹೆರಿಗೆ ಸುಸೂತ್ರವಾಗಲೆಂದು ದೇವಸ್ಥಾನಕ್ಕೆ ಹೋಗಿ ಬರೋಣಾವೆಂದು ಹೊರಟಿದ್ದರು. ಹತ್ತಿರ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿಯೇ ತೋಟನಹಳ್ಳಿಗೆ ತೆರಳುತ್ತಿದ್ದರು. ಆದರೆ ವೇಗವಾಗಿ ಬಂದ ಟಿಪ್ಪರ್ ಗಾಡಿಗೆ ಡಿಕ್ಕಿ ಹೊಡೆದಿದೆ.
ಸಿಂಚನಾ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ಸಿಂಚನಾ ಮೇಲೆ ಹರಿದಾಕ್ಷಣಾ ಹೊಟ್ಟೆಯಲ್ಲಿದ್ದ ಮಗು ಹೊರಗೆ ಬಂದಿದೆ. ಮಗು ವಿಲವಿಲ ಒದ್ದಾಡಿ ಅಲ್ಲಿಯೇ ಪ್ರಾಣ ಬಿಟ್ಟಿದೆ. ಅಪಾಯದಿಂದ ಪಾರಾದ ಪತಿ ಮಂಜುನಾಥ್, ಎಲ್ಲವನ್ನು ನೋಡಿ ದಿಗ್ಬ್ರಾಂತಗೊಂಡಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಮಂಜುನಾಥ್, ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದೆವು. ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತವಾಗಿದೆ. ಸಿಂಚನಾ ಹೊಟ್ಟೆಯಿಂದ ಮಗು ಹೊರಗೆ ಬಂದದ್ದು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.