ಸುದ್ದಿಒನ್, ಚಿತ್ರದುರ್ಗ, ನವೆಂಬರ್.15 : ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟ ಕಾರಣ ಗ್ರಾಮಸ್ಥರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಳ್ಳಕೆರೆ – ಬಳ್ಳಾರಿ ಹೆದ್ದಾರಿಯಲ್ಲಿ ಅಪಘಾತ | ಓರ್ವ ಸಾವು, ಗ್ರಾಮಸ್ಥರ ಪ್ರತಿಭಟನೆ#challakere_ballary_highway #RoadAccident pic.twitter.com/scXnDTMZ3F
— suddione-kannada News (@suddione) November 15, 2023
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ
ಬಿ.ಜಿ. ಕೆರೆಯ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಡಿಕ್ಕಿಯಾಗಿ 65 ವರ್ಷದ ಮಾರಣ್ಣ ಎಂಬಾತ ಮೃತಪಟ್ಟಿದ್ದಾನೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು
ರಸ್ತೆ ಅಪಘಾತ ಖಂಡಿಸಿ, ಸುಮಾರು 150 ಕ್ಕೂ ಜನರು ಏಕಾಏಕಿ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಹೆದ್ದಾರಿಯಲ್ಲಿ ಪದೇಪದೇ ಇಂತಹ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ವೃತ್ತ ನಿರೀಕ್ಷಕ ವಸಂತ್ ಅಸೋಡೆ ಹಾಗೂ ಚಳ್ಳಕೆರೆ ಉಪ ವಿಭಾಗದ ಅಧಿಕಾರಿಗಳು ಆಗಮಿಸಿದರು.
ಪ್ರತಿಭಟನಾಕಾರರನ್ನು ಮನವೊಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆ ವೇಳೆ ಹೆದ್ದಾರಿ ಬಂದ್ ಆದ ಕಾರಣ
ಕಿಲೋಮೀಟರ್ ಗಟ್ಟಲೆ ಬಸ್ಸು, ಲಾರಿ, ಕಾರು ಸಾಲುಗಟ್ಟಿ ನಿಂತಿದ್ದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.