ಈಗಂತೂ ಹಾರ್ಟ್ ಅಟ್ಯಾಕ್ ಆಗುವುದಕ್ಕೆ ವಯಸ್ಸಿನ ಮಿತಿಯೇ ಇಲ್ಲ. ಈ ಹಿಂದೆಲ್ಲ ವಯಸ್ಸಾದವರಲ್ಲಿ, ಒತ್ತಡದ ಜೀವನ ಮಾಡುತ್ತಿದ್ದವರಲ್ಲಿ ಹಾರ್ಟ್ ಅಟ್ಯಾಕ್ ಆಗ್ತಾ ಇತ್ತು. ಆದರೆ ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ ಸಣ್ಣ ವಯಸ್ಸಿನ ಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತೆ. ಆಡುತ್ತಾ ಕುಣಿಯುತ್ತಿದ್ದ, ಮೂರನೇ ಕ್ಲಾಸ್ ಮಗುಗೆ ಹಾರ್ಟ್ ಅಟ್ಯಾಕ್ ಆಗುತ್ತೆ ಅಂದ್ರೆ ಮನುಷ್ಯನ ಜೀವನ ಎಲ್ಲಿಗೆ ಬಂದು ನಿಂತಿದೆ ಅಂತ ಚಿಂತಿಸಬೇಕಾಗಿದೆ.
ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. 3ನೇ ಕ್ಲಾಸ್ ಓದುತ್ತಿದ್ದ 9 ವರ್ಷದ ಬಾಲಕಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾಳೆ. ಆಡಿ ಬೆಳೆಯುತ್ತಿದ್ದ ಮಗು ಅದು. ತಂದೆ ತಾಯಿ ಮಗಳ ಬಗ್ಗೆ ಸಾವಿರಾರು ಕನಸು ಕಂಡಿದ್ದರು. ಹೀಗೆ ಏನು ಅರಿಯದೆ ಇರುವ ವಯಸ್ಸಿಗೆನೆ ಪ್ರಾಣ ಕಳೆದುಕೊಂಡರೆ ಹೆತ್ತವರ ಸಂಕಟಕ್ಕೆ ಹೊಣೆ ಯಾರು..?
ತೇಜಸ್ವಿನಿ ಎಂದಿನಂತೆ ಮನೆಯಿಂದ ರೆಡಿಯಾಗಿ ಶಾಲೆಗೆ ಬಂದಿದ್ದಳು. ಆದರೆ ಶಾಲೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಶಾಲೆ ಸಿಬ್ಬಂದಿ ತೇಜಸ್ವಿನಿಯನ್ನು ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಾಗಲೇ ಪ್ರಾಣ ಹೋಗಿತ್ತು. ತೇಜಸ್ವಿನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಅಂತ ವೈದ್ಯರು ಹೇಳಿದ್ದಾರೆ. ಮಗಳ ಸಾವಿನ ಸುದ್ದಿ ಕೇಳಿದ ತಂದೆ ನಿಂಗರಾಜು, ತಾಯಿ ಶೃತಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಅಷ್ಟು ಪುಟ್ಟ ಮಗುಗೆ ಕಾರ್ಡಿಯಾಕ್ ಅರೆಸ್ಟ್ ಆಗೋದು ಅಂದ್ರೆ ಏನು..? ಪೋಷಕರಂತು ಮಗಳ ಹೆಣ ನೋಡಿ ಕಣ್ಣೀರು ಹಾಕಿದ್ದಾರೆ. ಅವರ ನೋವು, ಕಣ್ಣೀರು ಕಡಿಮೆಯಾಗುತ್ತಿಲ್ಲ. ಆದರೂ ಈ ಮಗುಗೆ ಆದ ಕಾರ್ಡಿಯಾಕ್ ಅರೆಸ್ಟ್ ವಿಚಾರ ಕೇಳಿ ರಾಜ್ಯದ ಜನರೇ ದಿಗ್ಬ್ರಾಂತರಾಗಿದ್ದಾರೆ.