ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 15 ಅಧಿಕಾರಿಗಳ ವಿರುದ್ಧ 68 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಲ್ಲೇ ಏಳು ಕಡೆ ದಾಳಿ ನಡೆದಿದೆ. ಸರ್ಕಾರಿ ಅಧಿಕಾರಿಗಳು ಹೆಚ್ಚು ಆಸ್ತಿ ಮಾಡಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.
ಬಿಬಿಎಂಪಿ ರಸ್ತೆ ಸೌಕರ್ಯ ಮತ್ತು ಮೂಲ ಸೌಕರ್ಯ ಎಫ್‌ಡಿಎ ಮಾಯಣ್ಣ ಮನೆ ಮೇಲೆ ದಾಳಿ ನಡೆದಿದೆ. ಕತ್ರಿಗುಪ್ಪೆ ನಿವಾಸದ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ನಂದಿನಿ ಲೇಔಟ್ ನಲ್ಲಿರುವ ಮಾಯಣ್ಣ ಆಪ್ತೆ ಉಮಾದೇವಿ ಅವರ ಮನೆ ಮೇಲೂ ದಾಳಿ ನಡೆದಿದೆ.
ಎಸಿಪಿ ಡಿವೈಎಸ್ಪಿ ರವಿಶಂಕರ್, ಇನ್ಸ್ಪೆಕ್ಟರ್ ಮಂಜುನಾಥ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಮಾಯಣ್ಣ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ದೊರೆತಿದೆ. ಇವುಗಳ ಮೌಲ್ಯಮಾಪನ ಮಾಡಲು ಅಧಿಕಾರಿಗಳು ಅಕ್ಕಸಾಲಿಗರನ್ನು ಕರೆಸಿದ್ದಾರೆ. ಮಾಯಣ್ಣ ಕಳೆದ ಏಳು ವರ್ಷದಿಂದ ಬಿಬಿಎಂಪಿಯಲ್ಲಿ ರಸ್ತೆ ಅಭಿವೃದ್ಧಿ ಮೂಲ ಸೌಕರ್ಯ ವಿಭಾಗದಲ್ಲಿ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.