ಚಿತ್ರದುರ್ಗ : ಎಸಿಬಿ ಬೆಲೆಗೆ ಬಿದ್ದ ಬಿಲ್ ಕಲೆಕ್ಟರ್

suddionenews
1 Min Read

ಚಿತ್ರದುರ್ಗ, (ಡಿ.29) : ಇ-ಸ್ವತ್ತು ಮಾಡಿಕೊಡಲು ಹಣಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಐಮಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಎಸಿಬಿ ಬೆಲೆಗೆ ಸಿಕ್ಕಿಬಿದ್ದಿದ್ದಾರೆ.

ಹಿರಿಯೂರು ತಾಲೂಕಿನ ದಾಸಣ್ಣನ ಮಾಳಿಗೆ ಗ್ರಾಮದ ವ್ಯಕ್ತಿಯೋರ್ವರಿಂದ  ಇ-ಸ್ವತ್ತು  ಮಾಡಿಕೊಡಲು 4 ಸಾವಿರ ರೂಪಾಯಿ ಹಣವನ್ನು ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಬುಧವಾರ ಗ್ರಾಮ ಪಂಚಾಯಿತಿಯಲ್ಲಿ ದೂರುದಾರರಿಂದ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಆರೋಪಿಯಿಂದ ಹಣ ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಎಸಿಬಿ ಅಧಿಕಾರಿಗಳಾದ ಬಸವರಾಜ್ ಆರ್. ಮುಗದಮ್, ಡಿವೈಎಸ್ಪಿ ಉಮೇಶ್ ಕುಮಾರ್, ಪೋಲಿಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *