ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ. ಜನಪ್ರತಿನಿಧಿ ನಿವಾಸದ ಮೇಲೆ ಎಸಿಬಿ ದಾಳಿ ನಡೆಸುತ್ತಿರುವುದು ಇದೆ ಮೊದಲು ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.
ಖಾಸಗಿ ವ್ಯಕ್ತಿಯಾಗಿದ್ದರೆ ಎಸಿಬಿ ದಾಳಿ ಮಾಡುವ ಹಾಗಿರಲಿಲ್ಲ. ಆದರೆ ಜಮೀರ್ ಅಹ್ಮದ್ ಎಂಎಲ್ಎ ಆದ ಬಳಿಕ ಆಸ್ತಿ ಗಳಕೆ ಹೆಚ್ಚಾಗಿದೆ. ಈಗ ಅವರು ಜನಪ್ರತಿನಿಧಿಯಾಗಿದ್ದಾರೆ. ಹೀಗಾಗಿ ಎಸಿಬಿ ದಾಳಿ ಮಾಡಬಹುದಾಗಿದೆ. ಕಳೆದ ವರ್ಷ ಐಎಂಎ ಕೇಸಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಜಮೀರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು. ಇಡಿ ಸೂಚನೆ ಮೇರೆಗೆ ಇದೀಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬೆಳಗ್ಗೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ.
ಎಸಿಬಿ ತಂಡಕ್ಕೆ ಜಮೀರ್ ಅಕ್ರಮ ಆಸ್ತಿ ಗಳಕೆಯ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಸಿಬಿ ಅಧಿಕಾರಿಗಳು ಜಮೀರ್ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.