ಸುದ್ದಿಒನ್, ಚಿತ್ರದುರ್ಗ : ನೂತನ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಸದಸ್ಯರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರಕ್ಕೆ ಮುಖ್ಯಮಂತ್ರಿ ಆಗಮಿಸಿದ್ದ ವೇಳೆ ಈ ಮನವಿಯನ್ನು ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದ ಸರ್ಕಾರಿ NPS ನೌಕರರಿಗೆ ಹಾಗೂ ನಿಗಮ ಮಂಡಳಿ ಅನುದಾನಿತ ನೌಕರರಿಗೆ 1.4.2006 ರಿಂದ ಜಾರಿ ಇರುವ ಅವೈಜ್ಞಾನಿಕವಾದ ಎನ್‌ಪಿಎಸ್ ಯೋಜನೆಯನ್ನು ಸರಕಾರ ರದ್ದು ಮಾಡಿ, ನಿಶ್ಚಿತ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಕರ್ನಾಟಕ ರಾಜ್ಯದ ಸರ್ಕಾರಿ NPS ನೌಕರರಿಗೆ ಹಾಗೂ ನಿಗಮ ಮಂಡಳಿ ,ಅನುದಾನಿತ ನೌಕರರಿಗೆ ಮಾರಕವಾಗಿರುವ NPS ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಜಾರಿಗೊಳಿಸುವ ಮೂಲಕ ನೌಕರರ ಹಾಗೂ ಕುಟುಂಬದ ಹಿತಕಾಪಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ
ಡಾ.ಸ.ರಾ.ಲೇಪಾಕ್ಷ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿ.ಕಲ್ಲೇಶ್, ಉಪಾಧ್ಯಕ್ಷರು, ರವಿ, ಕೆ.ಪಿ.ಟಿ.ಸಿ.ಎಲ್. ಜಿಲ್ಲಾಧ್ಯಕ್ಷರು, ಚಿತ್ರದುರ್ಗ ಹಾಗೂ ಇಕ್ಬಾಲ್ ಹಾಗೂ ನೌಕರರು ಹಾಜರಿದ್ದರು.