ಕೋಟೆನಾಡಿನಲ್ಲಿ ಶುಭಾರಂಭವಾದ ಅರಮನೆ ಸ್ವೀಟ್ಸ್‌ : ಚಿತ್ರದುರ್ಗದ ಮಳಿಗೆ ಉದ್ಘಾಟಿಸಿದ ಅಭಿಷೇಕ್ ಅಂಬರೀಶ್

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.22 : ಕೋಟೆನಾಡಿನಲ್ಲಿ ನೂತನವಾಗಿ ಆರಂಭವಾದ ಅರಮನೆ ಸ್ವೀಟ್ಸ್‌ ಮಳಿಗೆಯನ್ನು ನಟ ಅಭಿಷೇಕ್ ಅಂಬರೀಶ್ ಉದ್ಘಾಟಿಸಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ನೂತನ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಅರಮನೆ ಸ್ವೀಟ್ಸ್, ಚಿತ್ರದುರ್ಗ ನಗರದಲ್ಲಿ ತಮ್ಮ ಎರಡನೇ ಮಳಿಗೆಯನ್ನು ಹೊಂದಿದ್ದು,  ಸಮಕಾಲೀನ ಅಭಿರುಚಿಗೆ ತಕ್ಕಂತೆ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶುದ್ಧ, ರುಚಿಕರ ಮತ್ತು ಉತ್ತಮ ಗುಣಮಟ್ಟದ ಸಿಹಿ ಉತ್ಪನ್ನಗಳನ್ನು ಜನತೆಗೆ  ತಲುಪಿಸುತ್ತದೆ ಎಂಬ ಭರವಸೆಯಿದೆ. ಗ್ರಾಹಕರಿಗೆ ಪ್ರಾಮಾಣಿಕ ಸೇವೆ, ಉತ್ತಮ ಗುಣಮಟ್ಟದ ಸಿಹಿತಿಂಡಿಗಳು ಮತ್ತು ಕರ್ನಾಟಕ ಸೇರಿದಂತೆ ವಿವಿಧ ಪ್ರದೇಶಗಳ  ಸಿಹಿತಿಂಡಿಗಳು, ಸಾಂಪ್ರದಾಯಿಕ ಶೈಲಿಯಲ್ಲಿ ಅದ್ಭುತವಾದ ರುಚಿಯನ್ನು ನೀಡಲಿದೆ. ಈಗಾಗಲೇ ದಾವಣಗೆರೆಯಲ್ಲಿ ಮೊದಲ ಮಳಿಗೆ ಆರಂಭವಾಗಿದ್ದು, ಎರಡನೇ ಮಳಿಗೆಯನ್ನು ನಾನು ಉದ್ಘಾಟನೆ ಮಾಡಿರುವುದು ನನಗೆ ಅತೀವ ಸಂತಸವಾಗಿದೆ. ದಾವಣಗೆರೆ ಚಿತ್ರದುರ್ಗ ಅಷ್ಟೇ ಅಲ್ಲದೇ ನಾಡಿನಾದ್ಯಂತ ತನ್ನ ಮಳಿಗೆಗಳನ್ನು ವಿಸ್ತರಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಎಸ್.ಆರ್.ಎಸ್. ಸಮೂಹ ಸಂಸ್ಥೆಯ ಬಿ.ಎ. ಲಿಂಗಾರೆಡ್ಡಿ, ಕೆ.ಸಿ. ನಾಗರಾಜ, ಜಿ.ಎಸ್.ಅನಿತ್ ಕುಮಾರ್, ಅಮೋಘ, ಬಾಲಕೃಷ್ಣ ಅರಮನೆ ಸ್ವೀಟ್ಸ್ ಮಾಲೀಕರಾದ ಲಿಖಿತಾ ಮತ್ತು ಶ್ರೇಯಾ ಅವರು ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *