ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಅಲರ್ಟ್ ಆಗಿವೆ. ಹೊಸ ಹೊಸ ಪ್ಲ್ಯಾನ್ ರೂಪಿಸಲು ಸಜ್ಜಾಗಿವೆ. ಇದೀಗ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಸ್ ಪಿ ಪಕ್ಷ ಅಭಿಷೇಕ್ ಬಚ್ಚನ್ ಅವರನ್ನ ಸಂಪರ್ಕ ಮಾಡಿದೆ ಎನ್ನಲಾಗಿದೆ.
ಅಹಮದಾಬಾದ್ ಕ್ಷೇತ್ರದಿಂದ ಅಭಿಷೇಕ್ ಬಚ್ಚನ್ ರನ್ನು ಕಣಕ್ಕಿಳಿಯುವಂತೆ ಮನವಿ ಮಾಡಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಈ ಸಂಬಂಧ ಮುಂಬೈಗೆ ಭೇಟಿ ನೀಡಲಿದ್ದು, ರಾಜ್ಯಸಭಾ ಸದಸ್ಯೆ ಜಯ ಬಚ್ಚನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಅಕಸ್ಮಾತ್ ಎಲ್ಲಾ ಅಂದುಕೊಂಡಂತೆ ನಡೆದು ಅಭಿಷೇಕ್ ಬಚ್ಚನ್ ಅಲಹಾಬಾದ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಏಕೆಂದರೆ ಈ ಹಿಂದೆ ಅಂದ್ರೆ 1984ರಲ್ಲಿ ಇದೇ ಅಲಹಾಬಾದ್ ಕ್ಷೇತ್ರದಿಂದ ಅಮಿತಾಭ್ ಬಚ್ಚನ್ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದರು. ಅಲ್ಲದೆ ತಮ್ಮ ಎದುರಾಳಿಯಾಗಿದ್ದ ಹೇಮಾವತಿ ನಂದನ್ ಬಹುಗುಣ ಅವರ ವಿರುದ್ಧ ಭರ್ಜರಿ ಗೆಲುವು ಕಂಡಿದ್ದರು. ಚುನಾವಣೆಯಲ್ಲಿ ಅಮಿತಾಭ್ ಶೇ.68ರಷ್ಟು ಮತಗಳನ್ನು ಪಡೆದರೆ, ಬಹುಗುಣ ಶೇ.25ರಷ್ಟು ಮತಗಳನ್ನು ಪಡೆದಿದ್ದರು. ಈ ಮೂಲಕ ಅಮಿತಾಭ್ ಬಚ್ಚನ್ ಭರ್ಜರಿ ಗೆಲುವಿನೊಂದಿಗೆ ಲೋಕಸಭೆಗೆ ಹೋಗಿದ್ದರು.