ಕಾಂಗ್ರೆಸ್ ಪಕ್ಷ ಸತ್ತ ಕುದುರೆಯಿದ್ದಂತೆ, ಬಿಜೆಪಿಗೆ ಹಿಂಸಾತ್ಮಕ ಅಜೆಂಡಾಗಳೇ ಮುಖ್ಯ

ನವದೆಹಲಿ : ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಮುಂದುವರಿದಿದೆ. ಒಂದೆಡೆ ಆಮ್ ಆದ್ಮಿ ಪಕ್ಷ (ಎಎಪಿ) ರಾಷ್ಟ್ರ ರಾಜಕಾರಣದತ್ತ ಗಮನ ಹರಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭೇಟಿ ಮಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಅವರ ಭೇಟಿಯ ನಂತರ, ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸತ್ತ ಕುದುರೆಯಿದ್ದಂತೆ, ಅದಕ್ಕೆ ಲಾಠಿಯಿಂದ ಎಷ್ಟೇ ಹೊಡೆದರೂ ಅದು ಓಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ.

ಮುಂದುವರಿದು ಮಾತನಾಡುತ್ತಾ,
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತ್ರ ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆಯುವ ದಿಟ್ಟ ನಾಯಕ ಮತ್ತು ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪರ್ಯಾಯವಲ್ಲ ಎಂದು  ​​ಹೇಳಿದರು.

ಬಿಜೆಪಿ ಶಾಶ್ವತವಾಗಿ ಹಿಂಸಾತ್ಮಕ ಅಜೆಂಡಾದೊಂದಿಗೆ ಮುನ್ನಡೆಯುತ್ತಿದೆ ಎಂದು
ವಾಗ್ದಾಳಿ ಮುಂದುವರೆಸಿದರು.

ಬಿಜೆಪಿ ಸರಕಾರಗಳು ಎಂದಿಗೂ ಉತ್ತಮ ಶಾಲೆಗಳನ್ನು ನಿರ್ಮಿಸಿ, ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಅನಕ್ಷರಸ್ಥ ಗೂಂಡಾಗಳನ್ನು ತಯಾರು ಮಾಡುತ್ತಿದೆ ಎಂದು ಕಿಡಿ ಕಾರಿದರು.

Share This Article
Leave a Comment

Leave a Reply

Your email address will not be published. Required fields are marked *