ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೆ ಎಎಪಿ ಯೊಂದೇ ಪರಿಹಾರ : ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಗದೀಶ್

1 Min Read

ವರದಿ ಮತ್ತು ಫೋಟೋ ಕೃಪೆ

ಸುರೇಶ್ ಪಟ್ಟಣ್,                
ಮೊ : 87220 22817

ಚಿತ್ರದುರ್ಗ,(ಫೆ.18) : ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಗುಡಿಸಲು ರಹಿತವಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಜಗದೀಶ್ ತಿಳಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಪಾರ್ಟಿಯ ಪರವಾಗಿ ಮನೆ,ಮನೆ ಭೇಟಿ ನೀಡುವುದರ ಮೂಲಕ ಮತದಾರರನ್ನು ಸಂಪರ್ಕ ಮಾಡಿ ಮುಂದಿನ ಚುನಾವಣೆಯಲ್ಲಿ ಎಎಪಿ ಪಾರ್ಟಿಗೆ ಮತವನ್ನು ಹಾಕುವಂತೆ ಕೋರಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಡವರ ಪ್ರಮಾಣ ಹೆಚ್ಚಾಗಿದೆ ಅವರಿಗೆ ತಲೆಯ ಮೇಲೊಂದು ಸೂರು ಇಲ್ಲದಾಗಿದೆ. ಕ್ಷೇತ್ರದ ಬಹುತೇಕ ಜನತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಮನೆ ನಿರ್ಮಾಣ ನಮ್ಮ ಮೊದಲ ಗುರಿಯಾಗಿದೆ ಎಂದು ಹೇಳಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷದಿಂದ ಶಾಸಕರಾಗಿದ್ದವರು ಮತದಾರರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಬರೀ ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ. ಇಂತಹರಿಂದ ಕ್ಷೇತ್ರದ ಪ್ರಗತಿ ಸಾಧ್ಯವಿಲ್ಲ, ಮನೆ ಇಲ್ಲದವರಿಗೆ ಮನೆಯನ್ನು ನೀಡುವಂತ ಕಾರ್ಯವನ್ನು ಸಹಾ ಮಾಡಿಲ್ಲ. ಸ್ಲಂಗಳಲ್ಲಿಯೂ ಸಹಾ ಬಾಡಿಗೆ ಮನೆಗಳಲ್ಲಿ ಜನತೆ ವಾಸ ಮಾಡುತ್ತಿದ್ದಾರೆ. ಇವೆಲ್ಲಾ ಸಮಸ್ಯೆಗಳಿಗೆ ಎಎಪಿ ಯೊಂದೇ ಪರಿಹಾರ. ಮುಂದಿನ ದಿನದಲ್ಲಿ ನಾನು ಈ ಕ್ಷೇತ್ರದ ಶಾಸಕನಾದರೆ ಮೊದಲು ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಗುಡಿಸಲು ರಹಿತ ಕ್ಷೇತ್ರವನ್ನಾಗಿ ಮಾಡಿ ಎಲ್ಲಾ ಬಡವರಿಗೂ ಸಹಾ ವಾಸಕ್ಕೆ ಮನೆಯನ್ನು ನೀಡಲಾಗುವುದೆಂದು ತಿಳಿಸಿದರು.

ಅಭಿವೃದ್ದಿ ಎಂದರೆ ಬರೀ ರಸ್ತೆಗಳನ್ನು ನಿರ್ಮಾಣ ಮಾಡುವುದು ಚರಂಡಿಯನ್ನು ನಿರ್ಮಿಸುವುದು ಮಾತ್ರವಲ್ಲ ಬಡವರ ಸಂಕಷ್ಠಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕಿದೆ. ಅವರ ಆಗು ಹೋಗುಗಳಿಗೆ ಮನ್ನಣೆಯನ್ನು ನೀಡಬೇಕಿದೆ. ಮತದಾರರ ಸಂತೃಪ್ತರಾಗಿದ್ಧಾರೆ ಕ್ಷೇತ್ರ ಸುಧಾರಣೆಯನ್ನು ಹೊಂದುತ್ತದೆ ಎಂದು ಜಗದೀಶ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ, ಜಂಟಿ ಕಾರ್ಯದರ್ಶೀ ರವಿ ಆರ್, ಗುರುಪ್ರಸಾದ್, ಪ್ರಹ್ಲಾದ್, ಮಹಮ್ಮದ್ ಖಾಸಿಂ, ಆನಂದಪ್ಪ, ಲಿಂಗರಾಜು, ಮಹಾಂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *