ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ ಸಚಿವ ಅಶ್ವಥ್ ನಾರಾಯಣ್ ವಿರುದ್ಧ, ರಾಜ್ಯಾಧ್ಯಕ್ಷ ಪ್ರಥ್ವಿ ರೆಡ್ಡಿ ಸುದ್ದಿಗೋಷ್ಟಿ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಅವರ ಸ್ಪಷ್ಟನೆ ಜನರ ದಾರಿ ತಪ್ಪಿಸುವ ಹುನ್ನಾರವಾಗಿದೆ. ತಕ್ಷಣ ಸಚಿವ ಅಶ್ವಥ್ ನಾರಾಯಣ ಅವರನ್ನು ವಜಾ ಮಾಡಿ ಎಂದು ಪೃಥ್ವಿ ರೆಡ್ಡಿ ಒತ್ತಾಯಿಸಿದ್ದಾರೆ.
ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯಲ್ಲಿ ನಡೆದ ಟೆಂಡರ್ ನಲ್ಲಿ ಅಕ್ರಮ ಸಾಬೀತಾಗಿದೆ. ಸರ್ಕಾರಕ್ಕೆ ಕಮಿಷನ್ ಹೆಚ್ಚು ಪಡೆಯಲು ರಿ-ಟೆಂಡರ್ ಮಾಡಿದ್ದಾರೆ. ಆಪ್ ಪಕ್ಷದ ಬಳಿ ಎಲ್ಲಾ ದಾಖಲೆಗಳಿವೆ. 17 ಕೋಟಿ ಅನುಮೋದನೆ ಇತ್ತು ಆದರೆ ಬಿಡ್ ಬಂದಿದ್ದು 21 ಕೋಟಿಗೆ. ಸಿಂಗಲ್ ಟೆಂಡರ್ ಗೆ ಕೊಡೋದಕ್ಕಾಗಲ್ಲ ಅಂತ ಟೆಂಡರ್ ಕ್ಯಾನ್ಸಲ್ ಆಯ್ತು. Intellect systems ಕಂಪನಿ ಮೊದಲ ಟೆಂಡರ್ ನಲ್ಲಿ disqualify ಆಗಿದ್ದರು. 2 ತಿಂಗಳ ಒಳಗಡೆ ಸುಳ್ಳು ದಾಖಲೆ ನೀಡಿ 33 ಕೋಟಿ ಬಿಸ್ನೆಸ್ ಮಾಡಿದ್ದೇವೆ ಎಂದಿದ್ದಾರೆ. ಐಟಿ ಕಂಪನಿ ಹಾರ್ಡ್ ವೇರ್ ವಸ್ತುಗಳ ಖರೀದಿಯ ಫೇಕ್ ಡಾಕ್ಯುಮೆಂಟ್ ಆಗಿದೆ.
22ಕೋಟಿ ರುಪಾಯಿಯ ಫೇಕ್ ಡಾಕ್ಯುಮೆಂಟ್ ಕೊಟ್ಟಿದ್ದಾರೆ. 22 ಕೋಟಿಗೆ ಕರೆಯಲಾಗಿದ್ದ ಟೆಂಡರ್ ರದ್ದುಗೊಳಿಸಿ ಎರಡನೇ ಬಾರಿ 15.99 ಕೋಟಿ ರುಪಾಯಿಗಳಿಗೆ ಅಂತಿಮಗೊಳಿಸಲಾಗಿದೆ. ಹಗರಣ ಬಯಲು ಮಾಡಿದ್ರೂ ತನಿಖೆ ಮಾಡಿಸಿಲ್ಲ. ಇಂಟಲೆಕ್ಟ್ ಸಿಸ್ಟಂ 2 ತಿಂಗಳ ಅವಧಿಯಲ್ಲಿ 33 ಕೋಟಿಯಷ್ಟು ಸಾಮಾಗ್ರಿ ಖರೀದಿ ಮಾಡಿರುವ ಫೇಕ್ ಡಾಕ್ಯುಮೆಂಟ್ ನೀಡಿದೆ. ಯಾವುದೇ ಅನುಭವ ಇಲ್ಲದ ಕಂಪೆನಿಗೆ ಟೆಂಡರ್ ನೀಡಲಾಗಿದೆ.
ಲ್ಯಾಪ್ ಟಾಪ್ ಸ್ಕ್ಯಾಂಡಲ್ ನಲ್ಲೂ ಇದೇ ಕಂಪೆನಿ ಭಾಗಿಯಾಗಿತ್ತು. ಸಿಬಿಐ ತನಿಖೆಗೆ ಕೂಡಲೇ ವಹಿಸಬೇಕು. ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಂಗ ಹೋರಾಟಕ್ಕೆ ಇಳಿತಿವಿ ಎಂದು ಪ್ರಥ್ವಿ ರೆಡ್ಡಿ ಹೇಳಿದ್ದಾರೆ.