Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಮ್ ಆದ್ಮಿ ಪಾರ್ಟಿಯ ಚಿತ್ರದುರ್ಗದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ : ಬಿ.ಇ.ಜಗದೀಶ್

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.17) : ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಈ ಹಿಂದೆ ಇದ್ದ ಜಿಲ್ಲಾ ಸಮಿತಿಯನ್ನು ವಿಸರ್ಜನೆ ಮಾಡಿ ನೂತನವಾಗಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಧ್ಯಕ್ಷರಾಗಿದ್ದ ಫಾರೂಕ್ ರವರು ಏಕ ಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ಪಕ್ಷವನ್ನು ಇಕ್ಕಟಿಗೆ ಸಿಲುಕಿಸಿದ್ದರು. ಅಲ್ಲದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಬೇರೆ ಕಡೆಯಲ್ಲಿ ಕುಳಿತು ಪಕ್ಷದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ನಮ್ಮದೇ ಆದ ಕಚೇರಿ ಇದೆ ಅಲ್ಲಿ ಬಂದು ಮಾತನಾಡುವ ಸಲಹೆಯನ್ನು ನೀಡುವ ಕಾರ್ಯವನ್ನು ಮಾಡಿರಲಿಲ್ಲ ಕೆಲವೊಮ್ಮೆ ಜಿಲ್ಲಾ ಪದಾಧಿಕಾರಿಗಳನ್ನು ಕೇಳದೇ ಏಕ ಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು. ಇದರ ಬಗ್ಗೆ ಜಿಲ್ಲಾ ಸಮಿತಿಯಲ್ಲಿ ಆಕ್ಷೇಪ ಇತ್ತೂ ಈ ಹಿನ್ನಲೆಯಲ್ಲಿ ಅವರ ಜಾಗಕ್ಕೆ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಲ್ಲದೆ ಪೂರ್ಣ ಪ್ರಮಾಣದ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದರು.

ನೂತನ ಜಿಲ್ಲಾಧ್ಯಕ್ಷರಾದ ಲಕ್ಷ್ಮೀನಾರಾಯಣ ರೆಡ್ಡಿ ಮಾತನಾಡಿ, ಎಎಪಿ ಪಾರ್ಟಿಗೆ ನಾನು ನೂತನವಾಗಿ ಅಧ್ಯಕ್ಷನಾಗಿದ್ದೇನೆ ಮುಂದಿನ ದಿನದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೋರಾಟವನ್ನು ಮಾಡಲಾಗುವುದು, ಮುಂದಿನ ಎರಡು ಮೂರು ದಿನದಲ್ಲಿ ಪಾರ್ಟಿಯ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಭ್ರಷ್ಠಾಚಾರದ ವಿರುದ್ದ ಹೋರಾಟವನ್ನು ಮಾಡಲಾಗುವುದು. ಶಿಕ್ಷಣ, ಆರೋಗ್ಯ, ಮಹಿಳಿಯರ ಸಬಲಿಕರಣ ಸೇರಿದಂತೆ ಇತರೆ ವಿಷಯಗಳ ಬಗ್ಗೆ ವಿವಿಧ ರೀತಿಯ ಯೋಜನೆಯನ್ನು ಮುಂದಿನ ದಿನದಲ್ಲಿ ರೂಪಿಸಲಾಗುವುದು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಡ ಜನತೆಗೆ ಸೂರನ್ನು ನೀಡಿಲ್ಲ, ಸರಿಯಾದ ರಸ್ತೆಗಳಿಲ್ಲ, ಈಗ ನಿರ್ಮಾಣ ಮಾಡಿರುವ ರಸ್ತೆಗಳ ನಿರ್ಮಾಣ ಅವೈಜ್ಞಾನಿಕವಾದ ಕೆಲಸವಾಗಿದೆ ಎಂದರು.

ಎಎಪಿಗೆ ನೂತನವಾಗಿ ನೇಮಕವಾದ ಜಿಲ್ಲಾ ಪದಾಧಿಕಾರಿಗಳ ಪಟ್ಟಿ  :

ಎಎಪಿ ಪಾರ್ಟಿಯ ಜಿಲ್ಲಾ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಕೆ.ಲಕ್ಷ್ಮೀ ನಾರಾಯಣ ರೆಡ್ಡಿ,

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆಂಚಪ್ಪ,

ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಎಂ.ರಾಮಪ್ಪ,

ಜಿಲ್ಲಾ ಉಪಾಧ್ಯಕ್ಷರಾಗಿ ಪ್ರೋ.ಸಿ.ಕುಬೇಂದ್ರ ನಾಯ್ಕ್, ತಿಮ್ಮಾರೆಡ್ಡಿ ,

ಖಂಜಾಚಿಯಾಗಿ ಎಂ.ರಾಜಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ತಿಪ್ಪೇಸ್ವಾಮಿ,

ಜಂಟಿ ಕಾರ್ಯದರ್ಶಿಯಾಗಿ ವೇಣುಗೋಪಾಲ, ಜಮೀರ್ ಆಹಮ್ಮದ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ರಾಧ, ಕಾರ್ಯದಶಿಯಾಗಿ ಶ್ರೀಮತಿ ಅನಿಲಮ್ಮ ಸೇರಿದಂತೆ 7 ಜನರನ್ನು ಜಂಟಿ ಮಹಿಳಾ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

ಗೋಷ್ಠಿಯಲ್ಲಿ ಪಾಪಣ್ಣ, ರಾಜು, ಮಹಾಂತೇಶ್, ತಿಮ್ಮಣ್ಣ, ಕುಬೇರ ನಾಯ್ಕ್, ರಾಮ ಪ್ರಕಾಶ್ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೋಕಸಭಾ ಚುನಾವಣೆ 2024 | ಮೊದಲ ಪಟ್ಟಿಯಲ್ಲಿ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಯಾರು ಗೊತ್ತಾ?

  ಸುದ್ದಿಒನ್ : ಭಾರತೀಯ ಜನತಾ ಪಕ್ಷ ಶನಿವಾರ ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಬಿಜೆಪಿ ಮುಸ್ಲಿಂ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿದೆ. ಅವರೇ ಕೇರಳದ

ಹಲ್ಲುಗಳ ಆರೈಕೆ : ಹಲ್ಲುಜ್ಜುವ ಬ್ರಷ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ‌ಬದಲಾಯಿಸಬೇಕು ?

  ಸುದ್ದಿಒನ್ : ಕೆಲವರು ಹಲ್ಲುಜ್ಜುವ ಬ್ರಷ್ ಸವೆದು ಹೋದರೂ ಅದನ್ನೇ ಬಳಸುತ್ತಿರುತ್ತಾರೆ. ಹಲ್ಲಿನ ಆರೈಕೆಯ ವಿಷಯಕ್ಕೆ ಬಂದಾಗ ಪ್ರತಿದಿನ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಸಮಯಕ್ಕೆ ಸರಿಯಾಗಿ ಬ್ರಷ್ ಅನ್ನು ಬದಲಾಯಿಸುವುದು ಅಷ್ಟೇ ಮುಖ್ಯ.

ಈ ರಾಶಿಯವರು ಜನ್ಮದಿಂದಲೇ ಭಾಗ್ಯದ ಒಡೆಯ

ಈ ರಾಶಿಯವರು ಜನ್ಮದಿಂದಲೇ ಭಾಗ್ಯದ ಒಡೆಯ ಈ ರಾಶಿಯವರಿಗೆ ಉದ್ಯೋಗದಲ್ಲಿ ಧನ ಲಾಭ, ಪಾಲುಗಾರಿಕೆಯ ವ್ಯವಹಾರಗಳಲ್ಲಿ ಆರ್ಥಿಕ ಮುನ್ನಡೆ, ಶುಭಕಾರ್ಯ ಯಶಸ್ಸು, ಭಾನುವಾರ ರಾಶಿ ಭವಿಷ್ಯ -ಮಾರ್ಚ್-3,2024 ಸೂರ್ಯೋದಯ: 06:36, ಸೂರ್ಯಾಸ್ತ : 06:19

error: Content is protected !!