ಚಿತ್ರದುರ್ಗ : ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರಿಯೂರಿನಲ್ಲಿ ಶನಿವಾರ ಸಂಜೆ ನಡೆದಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡುವ ಸಲುವಾಗಿ ಅಂಗಡಿಯನ್ನು ಸ್ವಚ್ಛಗೊಳಿಸುವ ವೇಳೆ ನೀರಿನ ಮೋಟಾರ್ ಆನ್ ಮಾಡಿಕೊಂಡು ತೊಳೆಯುವಾಗ ಶಟರ್ ಗೆ ವಿದ್ಯುತ್ ಸ್ಪರ್ಶಿಸಿ ಈ ಅವಘಡ ಸಂಭವಿಸಿ
ಯುವಕ ಸಾವನ್ನಪ್ಪಿದ್ದಾನೆ.
ನಗರದ ಶ್ರೀಶೈಲ ಸರ್ಕಲ್ ಸಮೀಪದ ಅಂಗಡಿ ಮಾಲೀಕ ಮಹಾವೀರ್ ಜೈನ್ ಅವರ ಪುತ್ರ ರಕ್ಷಿತ್ (22) ವರ್ಷ ಮೃತ ಯುವಕ ಎಂದು ಗುರುತಿಸಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ ಮಾಡುಲು ಅಂಗಡಿಯಲ್ಲಿ ನೀರಿನ ಮೋಟಾರ್ ಚಾಲೂ ಮಾಡಿಕೊಂಡು ಅಂಗಡಿಯಲ್ಲಿ ಕ್ಲೀನ್ ಮಾಡಿಕೊಂಡು, ಶೇಟರ್ ತೊಳೆಯುವಾಗ ಈ ಅವಘಡ ಸಂಭವಿಸಿದೆ.
ಮೃತನ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಹಿರಿಯೂರು ನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.