ಮಹಿಳಾ ದಿನದಂದು ತಲೆಬೋಳಿಸಿಕೊಂಡ ಯುವತಿ! ಯಾಕೆ ಗೊತ್ತೆ 

ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಈ ಒಂದು ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ. ಯಾವ ಕಾರಣ ಎಂದು ಕೇಳಿದರೆ ಆಶ್ಚರ್ಯ ಪಡುತ್ತಿರಾ.ಮದುವೆ ವಿಚಾರಕ್ಕೆ ಬೇಸೆತ್ತು ಈ ಯುವತಿ ತಲೆ ಬೊಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ.

ತನ್ನ ಕುಟುಂಬದಿಂದ ಹೆಚ್ಚುತ್ತಿರುವ ವಿವಾಹದ ಒತ್ತಡದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ತಲೆ ಬೋಳಿಸಿಕೊಂಡಿದ್ದಾರೆ. ಮನೆಯವರ ನಿರಂತರ ಮದುವೆ ಒತ್ತಡದಿಂದ ಪಾರಾಗಲು ಈ ಹೆಜ್ಜೆ ಇಟ್ಟಿದ್ದೇನೆ ಎಂದು ಆಕೆ ಹೇಳಿದ್ದಾಳೆ.

https://www.instagram.com/reel/DVghc5aD4ie/?igsh=MWw5Y2NmbmliOW04Nw==

ವೀಡಿಯೊದಲ್ಲಿ, ಮಹಿಳೆ ತನ್ನ ಕೂದಲನ್ನು ಕತ್ತರಿಸುವುದು ತನಗೆ ನಿಜವಾಗಿಯೂ ಇಷ್ಟಿರಲಿಲ್ಲ ಎಂದು ವಿವರಿಸುತ್ತಾಳೆ. ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ಅತೀಯಾಗಿ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡದಿಂದಾಗಿ ಮಣಿದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

ಯುವತಿ ತನ್ನ ವಿಡಿಯೋದಲ್ಲಿ ಸಮಾಜದ ನಡವಳಿಕೆ, ವರ್ತನೆಯ ಬಗ್ಗೆ ಕಿಡಿಕಾರಿದ್ದಾರೆ.ಮದುವೆಯ ವಿಚಾರದಲ್ಲಿ ಹೆಣ್ಣಿನ ಭಾವನೆಗಳಿಗೆ ಬೆಲೆ ಇಲ್ಲವೆ? ಮಹಿಳೆಯರು ತಮ್ಮ ನೋಟ ಅಥವಾ ಜೀವನ ನಿರ್ಧಾರಗಳ ಬಗ್ಗೆ ಅವರೇ ಆಯ್ಕೆಗಳನ್ನು ಮಾಡಿದಾಗ ಸಮಾಜ ಏಕೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

Share This Article