ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿ ಮುಂದುವರೆಸಿದೆ. ಕಳೆದ ಒಂದು ವರ್ಷದಿಂದ ಯುದ್ಧ ನಡೆಯುತ್ತಲೇ ಇದೆ. ರಷ್ಯಾಗೆ ಹೋಲಿಕೆ ಮಾಡಿಕೊಂಡರೆ ಬಹಳ ಪುಟ್ಟ ರಾಷ್ಟ್ರವಾದ ಉಕ್ರೇನ್ ತನ್ನ ಶಕ್ತಿ ಮೀರಿ ರಷ್ಯಾದ ಮೇಲೆ ಯುದ್ಧವನ್ನು ಸಾರುತ್ತಿದೆ. ಇದೀಗ ಯುದ್ದ ಶುರುವಾದ ಒಂದು ವರ್ಷದ ಬಳಿಕ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ ಗೆ ಭೇಟಿ ನೀಡಿದ್ದಾರೆ.
ಜೋ ಬೈಡೆನ್, ನಾವೂ ಉಕ್ರೇನ್ ಗೆ 500 ಮಿಲಿಯನ್ ಸಹಾಯ ಮಾಡಲು ಸಿದ್ಧವಿದ್ದೇವೆ ಎಂದು ಘೋಷಿಸಿದೆ. ಜೋ ಬೈಡೆನ್, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ರ್ಝೆಲೆಕ್ಸಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ರಷ್ಯಾವನ್ನು ಬೆಂಬಲಿಸುತ್ತಿರುವ ದೇಶಗಳನ್ನು ನಾವೂ ವಿರೋಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಇಬ್ಬರು ಕೀವ್ ನಗರದ ರಸ್ತೆಗಳಲ್ಲಿ ಸಂಚರಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಉಕ್ರೇನ್ ಸೇನಾಧಿಕಾರಿಗಳು ಕೂಡ ಈ ವೇಳೆ ಭದ್ರತೆ ನೋಡಿಕೊಂಡಿದ್ದರು. ಮಡಿದ ವೀರರಿಗೆ ಜೋ ಬೈಡೆನ್ ಹೂಗಳನ್ನು ಇಟ್ಟು ನಮಸ್ಕರಿಸಿ ಬಂದಿದ್ದಾರೆ. ಇನ್ನು ಯುದ್ಧಕ್ಕೆ ಬೇಕಾದ ಸಾಮಾಗ್ರಿಗಳನ್ನು ಆದಷ್ಟು ಬೇಗ ನೀಡುತ್ತೇವೆ ಎಂದು ತಿಳಿಸಿ ಬಂದಿದ್ದಾರೆ.