ನವದೆಹಲಿ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಒತ್ತಾಯಿಸಿ, ಮಹಿಳಾ ಕುಸ್ತಿಪಟುಗಳು ದೊಡ್ಡಮಟ್ಟದ ಪ್ರತಿಭಟನೆಯನ್ನು ಮಾಡಿದ್ದರು. ಆದರೂ ಬ್ರಿಜ್ ಭೂಷಣ್ ಬಗ್ಗೆ ಯಾವುದೇ ತನಿಖೆ ಕೂಡ ನಡೆದಿಲ್ಲ. ಇದೀಗ ಕುಸ್ತಿಪಟು ವಿನೇಶ್ ಪೋಗಟ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಬ್ರಿಜ್ ಭೂಷಣ್ ರನ್ನು ಸರ್ಕಾರ ರಕ್ಷಿಸಿತ್ತಿದೆ. ಡಬ್ಲ್ಯುಎಫ್ಐ ಮುಖ್ಯಸ್ಥರನ್ನು ಶೀಘ್ರವೇ ಬಂಧಿಸುವುದಕ್ಕೆ ಹಾಗಲ್ಲ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ತಾತ್ಕಾಲಿಕವಾಗಿ ತಮ್ಮ ಪ್ರತಿಭಟನೆ ನಿಲ್ಲಿಸಿರುವ ಕುಸ್ತಿಪಟುಗಳು, ಏಪ್ರಿಲ್ 23ರಂದು ದೊಡ್ಡಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ದೆಹಲಿಯ ಜಂತರ್ ಮಂಥರ್ ನಲ್ಲಿ ಏಪ್ರಿಲ್ 23ರಂದು ಪ್ರತಿಭಟನೆ ನಡೆಸಿ, ಭೂಷಣ್ ಸಿಂಗ್ ರ ಬಂಧನಕ್ಕೆ ಒತ್ತಾಯಿಸಲಾಗುತ್ತದೆ. ಇನ್ನು ಕುಸ್ತಿಪಟುಗಳಿಗೆ ರೈತ ಸಂಘಟನೆ ಕೂಡ ಬೆಂಬಲ ನೀಡಿದೆ. ಈ ಮುಂಚೆ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಬೇಡದ ಕೃಷಿ ಕಾನೂನಗಳ ವಿರುದ್ಧ ಹೋರಾಟ ಮಾಡಿ ಸಕ್ಸಸ್ ಆಗಿದ್ದರು. ಇದೀಗ ಕುಸ್ತಿಪಟುಗಳಿಗೂ ಬೆಂಬಲ ಸೂಚಿಸಿದ್ದಾರೆ.