ಬೆಂಗಳೂರು; ಕನ್ನಡ ಇಂಡಸ್ಟ್ರಿಯಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವಂಚನೆ ಮಾಡಿದ ಆರೋಪವನ್ನ ಸೂರಪ್ಪ ಬಾಬು ಎದುರಿಸುತ್ತಿದ್ದಾರೆ. ಕನ್ನಡ ಇಂಡಸ್ಟ್ರಿಗೆ ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳನ್ನ ನೀಡಿದವರು ಸೂರಪ್ಪ ಬಾಬು. ಇದೀಗ ವಂಚನೆ ಆರೋಪವನ್ನು ಎದುರಿಸುತ್ತಿದ್ದಾರೆ. ಕೋಟಿಗೊಬ್ಬ, ಪೃಥ್ವಿ ಸೇರಿದಂತೆ ಹಲವು ಸೂಪರ್ ಡೂಪರ್ ಸಿನಿಮಾಗಳನ್ನ ನೀಡಿದವರು.
ಸಿನಿಮಾ ವಿಚಾರದಲ್ಲಿಯೇ ವಂಚನೆ ಆರೋಪ ಕೇಳಿ ಬಂದಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಿಳೆಯೊಬ್ಬರ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಕೋಟಿಗೊಬ್ಬ 3 ಸಿನಿಮಾ ಮಾಡಿದ ಮೇಲೆ ಸೂರಪ್ಪ ಬಾಬು ಬೇರೆ ಯಾವುದೇ ಸಿನಿಮಾವನ್ನು ಮಾಡಿಲ್ಲ. ಕೋಟಿಗೊಬ್ಬ 3 ಕೂಡ ನಿರೀಕ್ಷಿತ ಮಟ್ಟಿಗೆ ಕಲೆಕ್ಷನ್ ಏನು ಮಾಡಿಲ್ಲ.
ಮಹಿಳೆ ನೀಡಿದ ದೂರಿನಲ್ಲಿ, ಆ ಮಹಿಳೆಗೆ ಸೂರಪ್ಪ ಬಾಬು 2023ರಲ್ಲಿ ಪರಿಚಯವಾಗಿದ್ದರಂತೆ. ಆ ವೇಳೆ ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರ ಜೊತೆಗೆ ಸಿನಿಮಾ ಮಾಡ್ತಾ ಇದ್ದೀನಿ ಅಂತ ಸೂರಪ್ಪ ಬಾಬು ಹೇಳಿದ್ದರಂತೆ. ಬಳಿಕ ಸಾಲ ಬೇಕೆಂದು ಆ ಮಹಿಳೆ ಬಳಿ ಹೋಗಿದ್ದ ಸೂರಪ್ಪ ಬಾಬು, 92 ಲಕ್ಷ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದಾರಂತೆ. ದೂರುದಾರೆ ಹಂತ ಹಂತವಾಗಿ ಹಣವನ್ನು ನೀಡಿದ್ದಾರಂತೆ. ಹಣ ಪಡೆದ ಕೆಲವು ದಿನಗಳ ಬಳಿಕ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಕ್ಕಿರಲಿಲ್ಲವಂತೆ. ಸಿನಿಮಾ ಮಾಡ್ತಾ ಇರೋದು ಸುಳ್ಳು ಎಂದು ತಿಳಿದ ಮೇಲೆ ಮಹಿಳೆ ಹಣ ವಾಪಾಸ್ ಕೇಳೊದ್ದಾರೆ. 25 ಲಕ್ಷ ಹಿಂತಿರುಗಿಸಿ ಸುಮ್ಮನಾಗಿದ್ದಾರೆ. ಉಳಿದ ಹಣ ಕೇಳುವುದಕ್ಕೆ ಹೋದರೆ ಬೆದರಿಕೆ ಹಾಕಿದ್ದರಂತೆ. ಆ ಸಂಬಂಧ ಇದೀಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.






