Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಾಯಿ ಕಾರಣಕ್ಕೆ ನಟ ದರ್ಶನ್ ವಿರುದ್ಧ ದೂರು ನೀಡಿದ ಮಹಿಳೆ..!

---Advertisement---

ಹೇಳಿ‌ ಕೇಳಿ ದರ್ಶನ್ ಪ್ರಾಣಿ ಪ್ರಿಯ. ಅವರ ಫಾರ್ಮ್ ಹೌಸ್ ನಲ್ಲಿ ಹಲವು ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ. ಅದರಲ್ಲಿ ನಾಯಿ ಕೂಡ ಒಂದು. ದರ್ಶನ್ ಗೆ ನಾಯಿಗಳೆಂದರು ಕೂಡ ತುಂಬಾ ಪ್ರೀತಿ. ಇದೀಗ ದರ್ಶನ್ ಸಾಕಿರುವ ನಾಯಿಗಳಿಂದ ಇದೀಗ ವಿವಾದ ಒಂದು ಉಂಟಾಗಿದೆ. ಇದೇ ಕಾರಣಕ್ಕೆ ಎಫ್ಐಆರ್ ದಾಖಲಾಗಿದೆ.

 

ಅಮಿತ ಜಿಂದಾಲ್ ಎಂಬ ಮಹಿಳೆ ದೂರು ನೀಡಿದ್ದಾರೆ. ದರ್ಶನ್ ಮನೆ ಮುಂದೆ ಅಮಿತ ಜಿಂದಾಲ್ ಕಾರು ನಿಲ್ಲಿಸಿದ್ದರು. ಕಾರು ತೆಗೆಯಲು ಹೋದಾಗ ದರ್ಶನ್ ಸಾಕು ನಾಯಿಗಳು ದಾಳಿ ಮಾಡಿ, ಕಚ್ಚಿವೆ. ಮಹಿಳೆಯ ಹೊಟ್ಟೆ ಮೇಲೆ ಗಾಯಗಳಾಗಿವೆ. ಈ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ದೂರು ದಾಖಲಾಗಿದೆ.

 

ಅಮಿತ ಜಿಂದಾಲ್ ಆಸ್ಪತ್ರೆಯೊಂದರ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಕಾರನ್ನು ದರ್ಶನ್ ಮನೆ ಮುಂದೆ‌ ನಿಲ್ಲಿಸಿದ್ದರು. ಕಾರು ತೆಗೆಯಲು ಬಂದಾಗ, ಆ ನಾಯಿಗಳನ್ನು ಕಂಡು, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಹೇಳಿದ್ದಾರೆ. ಆ ನಾಯಿಗಳನ್ನು ಬೇರೆಡೆಗೆ ಎಳೆದುಕೊಂಡು ಹೋಗುವುದಕ್ಕೆ ಹೇಳಿದ್ದಾರೆ. ಆದರೆ ನಾಯಿಗಳನ್ನು ಎಳೆದುಕೊಂಡು ಹೋಗಲಿಲ್ಲ. ನಾಯಿಗಳು ಮಹಿಳೆಯ ಮೇಲೆ ಎಗರಿವೆ. ಈ ವೇಳೆ ಅಲ್ಲಿನ ಸಿಬ್ಬಂದಿಗಳು ನಾಯಿಗಳನ್ನು ಬಿಡಿಸುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಮಹಿಳೆಯ ಹೊಟ್ಟೆಗೆ ನಾಯಿಗಳು ಕಚ್ಚಿವೆ.

 

ಈ ಸಂಬಂಧ ದರ್ಶನ್ ಮನೆಯ ಸಿಬ್ಬಂದಿ ಹಾಗೂ ದರ್ಶನ್ ಮೇಲೆ ದೂರು ದಾಖಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಮನೆಯ ಮುಂದೆ ನಾಯಿ ಇದೆ ಎಚ್ಚರಿಕೆ ಹಾಗೂ ಪಾರ್ಕಿಂಗ್ ನಿಷೇಧದ ಪೋಸ್ಟರ್ ಹಾಕಲಾಗಿದೆ. ಆದರೆ ಈ ಪೋಸ್ಟರ್ ಗಳು ನಾನು ಕಾರು ನಿಲ್ಲಿಸುವಾಗ ಇರಲಿಲ್ಲ ಎಂದು ಆ ಮಹಿಳೆ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...