ಚಳ್ಳಕೆರೆಯಲ್ಲಿ ನಾಳೆಯಿಂದ ಮೂರು ದಿನ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 : ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಶಿವಲಿಂಗಗಳ ಪ್ರತಿಷ್ಠಾಪನೆ ಮತ್ತು ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ವಿಮಲಕ್ಕೆ ಹೇಳಿದರು.

ನಗರದ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಗರದ ಬಿಇಒ ಕಚೇರಿ ಆವರಣದಲ್ಲಿ ಮೂರು ದಿನಗಳ ಕಾಲ ಶಿವರಾತ್ರಿ ಪ್ರಯುಕ್ತ ಪೂಜಾ ಕಾರ್ಯ ನೆರವೇರಿಸಲಾಗುವುದು. ಕೆಲ ಹಬ್ಬಗಳು ಜಾತಿ, ಜನಾಂಗ, ಬುಡಕಟ್ಟು ಆಚರಣೆ ವಿಭಾಗವಾಗಿ ಕಾಣುತ್ತೇವೆ. ಆದರೆ, ಮಹಾಶಿವರಾತ್ರಿ ಮನುಕುಲವೇ ಆಚರಿಸುವ ಹಬ್ಬವಾಗಿದೆ.

ಶಿವರಾತ್ರಿ ಅಂಗವಾಗಿ ಫೆ.25 ರಂದು ರೈತ ಸಶಕ್ತೀಕರಣೋತ್ಸವ, ಫೆ.26 ರಂದು ಶಿವರಾತ್ರಿ ಮಹೋತ್ಸವ, ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ, ಫೆ.27ರಂದು ಭಕ್ತರಿಗೆ ಅಭಿನಂದನಾ ಉತ್ಸವ ಆಚರಿಸುತ್ತೇವೆ. ಮೂರುದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಶಿವ ಪರಮಾತ್ಮ ಎಂದರೆ ಯಾರು, ತಪಸ್ವಿ ಶಂಕರನೆಂದರೆ ಯಾರು, ಶಿವಲೋಕ ಎಲ್ಲಿದೆ, ಗುಹ್ಯ ರಹಸ್ಯ ಹೀಗೆ ಆಧ್ಯಾತ್ಮಿಕ ವಿಚಾರ ಚಿಂತನೆಗಳ ಗೋಷ್ಟಿಗಳು ನಡೆಯುತ್ತವೆ. ಇದನ್ನು ಶಿವಭಕ್ತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಎಂ.ಎಸ್. ರಾಧಾ, ಓಂಕಾರಮ್ಮ, ಲಲಿತಮ್ಮ, ಚೂಡಾಮಣಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *