ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್ : ಎಲ್ಲಾ ಹಿಂದೂ ದೇವಾಲಯಗಳಲ್ಲಿ ವಿವಿಧ ರೀತಿಯ ಹಣ್ಣುಗಳು, ಹೂವುಗಳು ಮತ್ತು ವಿವಿಧ ರೀತಿಯ ಆಹಾರವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಉದಾಹರಣೆಗೆ, ಅಯ್ಯಪ್ಪ ಸ್ವಾಮಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ ಮತ್ತು ಗಣೇಶನಿಗೆ ಮೋದಕ ಅಥವಾ ಲಡ್ಡು, ನೈವೇದ್ಯವಾಗಿ ಅರ್ಪಿಸುವುದು ನಮಗೆಲ್ಲಾ ತಿಳಿದಿದೆ. ಅಲ್ಲದೆ ಕೆಲವು ದೇವಸ್ಥಾನಗಳಲ್ಲಿ ದೇವರಿಗೆ ಪಾಯಸ, ಪೊಂಗಲ್, ಪುಳಿಯೋಗರೆ, ಮೊಸರನ್ನ ಹೀಗೆ ನಾನಾ ಬಗೆಯ ಆಹಾರ ಪದಾರ್ಥಗಳನ್ನು ಅರ್ಪಿಸುತ್ತಾರೆ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಮಂಚ್ ಚಾಕಲೇಟನ್ನು ಅರ್ಪಿಸಲಾಗುತ್ತದೆ. ಕೇರಳದ ಅಪರೂಪದ ದೇವಸ್ಥಾನವೊಂದರಲ್ಲಿ ಈ ವಿಚಿತ್ರ ಆಚರಣೆ ನಡೆಯುತ್ತಿದೆ. ಇದರ ಹಿಂದಿನ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕೇರಳದ ಮಂಚ್ ಮುರುಗನ್ ದೇವಸ್ಥಾನದಲ್ಲಿ, ಮಂಚ್ ಚಾಕೊಲೇಟ್ ಅನ್ನು ದೇವತೆಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ, ಈ ದೇವಸ್ಥಾನದಲ್ಲಿ ವಿಶೇಷ ಸಂದರ್ಭಗಳಲ್ಲಿ ಮಂಚ್ ಚಾಕೊಲೇಟ್ ಅನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಕಳೆದ ಆರು ವರ್ಷಗಳಿಂದ ಈ ಪದ್ಧತಿಯನ್ನು ಆರಂಭಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಒಮ್ಮೆ ಒಬ್ಬ ಹುಡುಗ ದೇವಸ್ಥಾನದಲ್ಲಿ ಆಟವಾಡುತ್ತಿದ್ದಾಗ ಆ ದೇವಾಲಯದಲ್ಲಿದ್ದ ಗಂಟೆಯನ್ನು ಬಾರಿಸಿದನು. ಹಾಗೆ ಮಾಡಿದ್ದಕ್ಕೆ ಆತನ ಪೋಷಕರು ಗದರಿಸಿದ್ದರು. ಆ ರಾತ್ರಿ ಹುಡುಗನಿಗೆ ವಿಪರೀತ ಜ್ವರ ಬಂತು. ಆ ಹುಡುಗ ರಾತ್ರಿಯಿಡೀ ಮುರುಗನ ನಾಮಜಪ ಮಾಡುತ್ತಿದ್ದ. ಆದ್ದರಿಂದ ಮರುದಿನ ಅವನ ಪೋಷಕರು ಹುಡುಗನನ್ನು ದೇವಸ್ಥಾನಕ್ಕೆ ಕರೆತಂದರು.
ಈ ಸಂದರ್ಭದಲ್ಲಿ ಅರ್ಚಕರು ಬಾಲಕನ ಪೋಷಕರಿಗೆ ದೇವರಿಗೆ ಏನಾದರೂ ಅರ್ಪಿಸುವಂತೆ ಸೂಚಿಸಿದರು. ಪೋಷಕರು ಭಕ್ತಿಯಿಂದ ದೇವರಿಗೆ ಹೂವು, ಹಣ್ಣುಗಳನ್ನು ಅರ್ಪಿಸಿದರೆ, ಬಾಲಕನು ಗರ್ಭಗುಡಿಯಲ್ಲಿದ್ದ ದೇವರಿಗೆ ಮಂಚ್ ಚಾಕಲೇಟ್ ಅರ್ಪಿಸಿದನು. ಅಂದಿನಿಂದ ಕೆಲವೇ ದಿನಗಳಲ್ಲಿ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಆ ಬಳಿಕ ದೇವಸ್ಥಾನದಲ್ಲಿ ಮಂಚ್ ಚಾಕಲೇಟ್ ನೈವೇದ್ಯ ಮಾಡಿ ಪ್ರಸಾದ ವಿತರಿಸುವ ಸಂಪ್ರದಾಯ ಮುಂದುವರಿದಿದೆ ಎನ್ನಲಾಗಿದೆ.
ಈ ಸುದ್ದಿ ಗಾಳಿಯಂತೆ ಇಡೀ ಊರಿಗೆ ಹರಡುತ್ತದೆ. ಈ ಘಟನೆಯ ನಂತರ ಈ ದೇವರಿಗೆ ಮಂಚ್ ಮುರುಗನ್ ಎಂದು ಕರೆಯಲು ಆರಂಭಿಸುತ್ತಾರೆ. ಒಟ್ಟಾರೆಯಾಗಿ 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಮತ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್ಗಳ ಬಾಕ್ಸ್ ಹಿಡಿದು ದೇಗುಲಕ್ಕೆ ಬರುತ್ತಾರೆ ಎಂಬುದು ವಿಶೇಷ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್