ಹೊಸದುರ್ಗದ ಸಂಕಲ್ಪ ರವರ ಆನಂದ ಪುಷ್ಪ ಕೃತಿಗೆ ರಾಜ್ಯಮಟ್ಟದ ಬಸವ ಪುರಸ್ಕಾರ

suddionenews
1 Min Read

ಚಿತ್ರದುರ್ಗ :  ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಿಗೆರೆ ಗ್ರಾಮದ ಸಂಕಲ್ಪ ಕಾವ್ಯನಾಮದ ಸದಾಶಿವ ಡಿ ಓ ರವರ ಆನಂದ ಪುಷ್ಪ ಬೃಹತ್ ಕಾದಂಬರಿಗೆ ಮೇ  8 ರಂದು(ಭಾನುವಾರ) ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಬಸವ ಪುರಸ್ಕಾರ ಪ್ರದಾನ ಮಾಡಲಾಯಿತು.

ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್  (ರಿ) ಪಾಳಾ, ಗುಲ್ಬರ್ಗಾ
ವತಿಯಿಂದ ಪ್ರತಿವರ್ಷವೂ ನಾಡಿನ ಸಾಹಿತಿಗಳ ಪುಸ್ತಕಕ್ಕೆ ಬಸವ ಪುರಸ್ಕಾರವನ್ನು ನೀಡಲಾಗುತ್ತಿದೆ.

2022 ನೇ ಸಾಲಿನ ಪ್ರಶಸ್ತಿಗೆ 318 ಪುಸ್ತಕಗಳು ಬಂದಿದ್ದು, ಅದರಲ್ಲಿ ರಾಜ್ಯದಾಂತ 19 ಕವಿಗಳು ಆಯ್ಕೆಯಾಗಿದ್ದರು.

ವೇದಿಕೆಯಲ್ಲಿ ಪೂಜ್ಯ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಜಗದ್ಗುರು ಮರುಳಸಿದ್ದೇಶ್ವರ ಪೀಠ ಜೇವರ್ಗಿ, ಪ್ರೊ. ದಯನಂದ ಅಗಸರ್ ಕುಲಪತಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯ, ಪ್ರೊ. ರಮೇಶ್ ರಾಠೋಡ, ಡಾ. ಸತೀಶ ಕುಮಾರ್ ಹೊಸಮನಿ. ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ, ಶರಣಗೌಡ ಪಾಟೀಲ ಪಾಳಾ ಮತ್ತು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *