ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ವಿಶೇಷ ರ್ಯಾಂಪ್

suddionenews
1 Min Read

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರಿಗೆ ಮಂಡಿಚಿಪ್ಪಿನ ಸಮಸ್ಯೆ ಕಾಡುತ್ತಿದೆ. ಎಲ್ಲಿಯೇ ಹೋದರೂ ವೀಲ್ ಚೇರ್ ನಲ್ಲಿಯೇ ಓಡಾಡುತ್ತಿದ್ದಾರೆ. ಈಗ ಬಜೆಟ್ ಮಂಡನೆ ಕೂಡ ಶುರುವಾಗುತ್ತದೆ. ನಾಳೆಯಿಂದಾನೇ ಬಜೆಟ್ ಮುನ್ನ ಅಧಿವೇಶನ ನಡೆಯಲಿದೆ‌. ನಡೆಯಲು ಕಷ್ಟವಾಗುವ ಸಿಎಂ ಸಿದ್ದರಾಮಯ್ಯ ಅವರಿಗಾಗಿ ವಿಶೇಷ ರ್ಯಾಂಪ್ ನಿರ್ಮಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಕಲಾಪದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರ್ಯಾಂಪ್ ಸೃಷ್ಟಿಸಲಾಗಿದೆ. ಪಶ್ಚಿಮ ಭಾಗ ಅಂದ್ರೆ ಕೆಂಗಲ್ ಗೇಟ್ ಬಳಿ ರ್ಯಾಂಪ್ ಸೃಷ್ಟಿಸಲಾಗಿದೆ. ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಅವರು ಪಶ್ಚಿಮ ಭಾಗದಿಂದಾನೇ ವಿಧಾನಸೌಧದ ಒಳಗೆ ಬರುವುದು. ಹೀಗಾಗಿ ಅಲ್ಲಿ ವಿಶೇಷವಾಗಿ ರ್ಯಾಂಪ್ ಸೃಷ್ಟಿ ಮಾಡಲಾಗಿದೆ. ವಿಧಾನಸೌಧದ ಮೂರು ದ್ವಾರದಲ್ಲೂ ರ್ಯಾಂಪ್ ನಿರ್ಮಾಣ ಮಾಡಲಾಗಿದೆ.

ಮಾರ್ಚ್ 7ಕ್ಕೆ ಬಜೆಟ್ ಮಂಡಿಸಲಾಗುತ್ತದೆ. ಆದರೆ ಮಾರ್ಚ್ 3 ರಿಂದ ಬಜೆಟ್ ಮೇಲಿನ ಕಲಾಪ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರ ಪಾಲಿಗಿದು ದಾಖಲೆಯ ಬಜೆಟ್ ಆಗಲಿದೆ. ನಿಲ್ಲುವುದಕ್ಕೆ ಮಂಡಿ ಸಮಸ್ಯೆ ಇರುವ ಕಾರಣ ಕೂತೆ ಬಜೆಟ್ ಮಂಡನೆ ಮಾಡಬಹುದು. ಸಿಎಂ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಗ್ಯಾರಂಟಿಗಳನ್ನ ಜನಕ್ಕೆ ನೀಡಿದೆ. ಇದರ ನಡುವೆ ಬೇರೆ ಏನೆಲ್ಲಾ ಕೊಡಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇರಲಿದೆ. ಇನ್ನು ಆಡಳಿತ ಸರ್ಕಾರವನ್ನು ಕಲಾಪದ ವೇಳೆಯೇ ಮಣಿಸಲು ವಿರೋಧ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಏನೆಲ್ಲಾ ಅನಹುತಗಳಾಗಿವೆ. ಅದರ ಬಗ್ಗೆಯೂ ಪ್ಲ್ಯಾನ್ ಮಾಡಿಕೊಂಡಿದೆ. ಹಾಗೇ ರಾಜ್ಯದಲ್ಲಿ ಏರಿಕೆಯಾದ ಬೆಲೆಗಳು, ಮೆಟ್ರೋ ದರ, ಹಾಲಿನ ದರದ ಬಗ್ಗೆ ಎಲ್ಲಾ ಕಲಾಪದಲ್ಲಿ ಪ್ರಶ್ನಿಸಿ, ಆಡಳಿತ ಸರ್ಕಾರವನ್ನು ಮಣಿಸಲು ಪ್ಲ್ಯಾನ್ ಮಾಡಿಕೊಂಡಿವೆ.

Share This Article
Leave a Comment

Leave a Reply

Your email address will not be published. Required fields are marked *