ಚಳ್ಳಕೆರೆ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನು ತಾಲ್ಲೂಕಿನ ಟಿ ಎನ್ ಕೋಟೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಾಲೂಕಿನ 19 ನೇ ಸಮಸ್ಯೆ ಮುಕ್ತ ಗ್ರಾಮದ ಜೊತೆ ಜೊತೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಈ ಮೂಲಕ ಗಡಿ ಗ್ರಾಮಗಳ ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರು, ರೈತರು ಇನ್ನೂ ಆರು ತಿಂಗಳ ಕಾಲ ತಾಲ್ಲೂಕು ಕಛೇರಿಗೆ ಬಾರದೆ ರೀತಿಯಲ್ಲಿ ಅವರಿಗೆ ಕಂದಾಯ ಇಲಾಖೆಗೆ ಒಳಪಟ್ಟ ಸೌಲಭ್ಯಗಳನ್ನು ಕಲ್ಪಿಸಲಿದೆ.
ಗ್ರಾಮದಲ್ಲಿ ಪೌತಿ ಖಾತೆ,ಪಿಂಚಣಿ, ವ್ಯಾಕ್ಸಿನ್, ಸ್ಮಶಾನ ಸಮಸ್ಯೆ, ದಾರಿ ವಿವಾದ, ರೈತರ ಪಹಣಿ ಮಿಸ್ ಮ್ಯಾಚ್, ರೈತರ ಬೆಳೆ ಪರಿಹಾರ, ಎಫ್ ಐಡಿ, ಪಿಎಂ.ಕಿಸಾನ್, ಕ್ರಾಪ್ ಸರ್ವೆ, ಪೋಡಿ ಪ್ರಕರಣಗಳು ಹೀಗೆ ನೂರಕ್ಕೆ ನೂರರಷ್ಟು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳು ಇನ್ನೂ ಹೆಚ್ಚಿನ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಈ ವಿನೂತನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕೇಂದ್ರ ಸಚಿವರು, ಕ್ಷೇತ್ರದ ಶಾಸಕರು, ಎಂಎಲ್ ಸಿ ಸದಸ್ಯರು ಹೀಗೇ ಹಲವು ಜನ ಪ್ರತಿನಿಧಿಗಳು, ಜಿಲ್ಲಾ ಮಟ್ಟದ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮದ ಸರ್ವ ಜನಪ್ರತಿನಿಧಿಗಳು, ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.