ನಾಳೆ ಧಾರವಾಡಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿಗೆ ರೆಡಿಯಾಗಿದೆ ಸ್ಪೆಷಲ್ ಗಿಫ್ಟ್ : ಏನದರ ವಿಶೇಷತೆ ಗೊತ್ತಾ..?

 

 

ಹುಬ್ಬಳ್ಳಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ಕರ್ನಾಟಕ ರಾಜ್ಯಕ್ಕೆ ಸಿಕ್ಕಾಪಟ್ಟೆ ಭೇಟಿ ನೀಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಾಳೆ ಹುಬ್ಬಳ್ಳಿ – ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಅವರಿಗಾಗಿಯೇ ಸ್ಪೆಷಲ್ ಉಡುಗೊರೆಯೊಂದು ಸಿದ್ಧವಾಗಿದೆ.

ಐಐಟಿ.. ವಿಶ್ವದ ಅತಿ ಎತ್ತರದ ರೈಲ್ವೆ ಫ್ಲಾಟ್ ಫಾರಂ ಅನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಹಲವು ಬಗೆಯ ಉಡುಗೊರೆ ನೀಡಲು ಸಿದ್ಧತೆ ನಡೆಸಲಾಗಿದೆ. ಆ ಉಡುಗೊರೆಯಲ್ಲಿ ವಿಶೇಷತೆಯೂ ಅಡಗಿದೆ. ಕಲಘಟಗಿಯ ತೊಟ್ಟಿಲು, ಹಾವೇರಿಯ ಯಾಲಕ್ಕಿ ಮಾಲೆ, ಸಿದ್ದರೂಢರ ಮೂರ್ತಿ, ಕಸೂತಿಯ ಶಾಲು ಸೇರಿದಂತೆ ಹಲವು ಉಡುಗೊರೆ ನೀಡಲಿದ್ದಾರೆ.

ನರೇಂದ್ರ ಮೋದಿಯವರಿಗೆ ನೀಡುತ್ತಿರುವ ತೊಟ್ಟಿಲು ತುಂಬಾ ವಿಶೇಷವಾದದ್ದಾಗಿದೆ. ಎರಡು – ಮೂರು ತಲೆಮಾರಿನಿಂದ ತೊಟ್ಟಿಲು ಮಾಡಿಕೊಂಡು ಬಂದಿರುವ ಬಡಿಗೇರ ವಂಶಸ್ಥರಿಂದ ಈ ತೊಟ್ಟಿಲು ತಯಾರಾಗಿದೆ. ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಚಿತ್ರಗಳು, ಅವನ ತುಂಟಾಟ ಹೀಗೆ ಹಲವು ರೀತಿಯ ಚಿತ್ರಗಳಿವೆ. ತೇಗಿನ ಮರದಿಂದ ಮಾಡಿರುವ ಈ ತೊಟ್ಟಿಲಿನ ಭಾಗಕ್ಕೆ ಗಂಟೆಗಳನ್ನು ಕಟ್ಟಿರುವುದು ಆಕರ್ಷಣೆ ಉಂಟು ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!