Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

112 ವರ್ಷದ ಇತಿಹಾಸವಿರುವ ಸೊಸೈಟಿ ಈ ಹಿಂದೆ ಸಾಲದಲ್ಲಿ ಇತ್ತು, ಈಗ ಲಾಭದಲ್ಲಿದೆ : ನಿಶಾನಿ ಜಯ್ಯಣ್ಣ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,ಆ. 27) : ಸದಸ್ಯರ ಅನುಕೂಲಕ್ಕಾಗಿ ಗೃಹ ಸಾಲದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಬಂಗಾರದ ಮೇಲಿನ ಸಾಲವನ್ನು ಸಹಾ ಹೆಚ್ಚಿಗೆ ಮಾಡಲಾಗಿದೆ ಎಂದು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ನಿಶಾನಿ ಜಯ್ಯಣ್ಣ ತಿಳಿಸಿದರು.

ಚಿತ್ರದುರ್ಗ ನಗರದ ಶ್ರೀಮತಿ ಕಾಟಮ್ಮ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ 106ನೇ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, 112 ವರ್ಷ ಇತಿಹಾಸವನ್ನು ಹೊಂದಿರುವ ಸೊಸೈಟಿ ಈ ಹಿಂದೆ ಸಾಲದಲ್ಲಿ ಇತ್ತು. ಆದರೆ ಈಗ ಸೊಸೈಟಿಯನ್ನು ಲಾಭದ ಹಾದಿಗೆ ತೆಗೆದುಕೊಂಡುವ ಹೋಗಲಾಗಿದೆ. ಸದಸ್ಯರ ಉಪಯೋಗಕ್ಕಾಗಿ ಲಾಕರ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದರೊಂದಿಗೆ ಹಣವನ್ನು ದ್ವಿಗುಣಗೂಳಿಸುವ ಕಾರ್ಯವನ್ನು ಸೊಸೈಟಿ ಕಳೆದ ಮೂರು ತಿಂಗಳ ಹಿಂದೆ ಜಾರಿ ಮಾಡಲಾಗಿತ್ತು ಇದರಲ್ಲಿ ಹಲವಾರು ಜನ ಹಣವನ್ನು ತೊಡಗಿಸಿದ್ದಾರೆ ಎಂದರು.

ಸದಸ್ಯರಿಗೆ ಗೃಹ ಸಾಲದ ಪ್ರಮಾಣವನ್ನು 5 ಲಕ್ಷ ದಿಂದ 15 ಲಕ್ಷದವರೆಗೆ ಏರಿಕೆ ಮಾಡಲಾಗಿದೆ, ಇದರೊಂದಿಗೆ ಬಂಗಾರದ ಮೇಲಿನ ಸಾಲವನ್ನು ಸಹಾ 5 ಲಕ್ಷದವೆರೆಗೆ ಹೆಚ್ಚಳ ಮಾಡಲಾಗಿದೆ. ಇದಲ್ಲದೆ ಕೈ ಸಾಲವನ್ನು 50 ಸಾವಿರದಿಂದ 1 ಲಕ್ಷದವರೆಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಸೂಸೈಟಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಮಾತ್ರ ಇತ್ತು ಇದರ ಸದಸ್ಯರು ನಗರ ವ್ಯಾಪ್ತಿಯನ್ನು ಮೀರಿ ಬೇರೆ ಕಡೆಯಲ್ಲಿ ಇದ್ದಾರೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ಇರುವ ಕವಾಡಿಗರ ಹಟ್ಟಿ, ಕೊವೆರ ಹಟ್ಟಿ ಬಸವೇಶ್ವರ ನಗರ, ವಿದ್ಯಾ ನಗರವನ್ನು ಸೇರಿಸುವುದರಿಂದ ನಮ್ಮ ವ್ಯವಹಾರಕ್ಕೂ ಸಹಾ ಅನುಕೂಲವಾಗಲಿದೆ ಈ ಹಿನ್ನಲೆಯಲ್ಲಿ ನಮ್ಮ ಕಾಯ್ದೆಗೆ ತಿದ್ದುಪಡಿಯನ್ನು ತರುವುದರ ಮೂಲಕ ಜಾರಿ ಮಾಡಲಾಗುವುದೆಂದಾಗಿ ಸಭೆ ಸಮ್ಮತಿಸಿತು. ನಮ್ಮ ಸದಸ್ಯರಿಗೆ ವಿಮೆಯನ್ನು ಸಹಾ ಜಾರಿ ಮಾಡಲಾಗುತ್ತಿದೆ ಇದರ ಬಗ್ಗೆ ವಿಮಾ ಕಂಪನಿಯೊಂದರೊಂದಿಗೆ ಮಾತುಕತೆಯನ್ನು ಮಾಡಲಾಗಿದೆ ಸದಸ್ಯರು 60 ರೂ.ಗಳನ್ನು ಕಟ್ಟುವುದರ ಮೂಲಕ ಆಕಸ್ಮಾತ್ ಅಫಘಾತ್ ವಾಗಿ ಮರಣವನ್ನು ಹೊಂದಿದರೆ 1 ಲಕ್ಷ ರೂ ದೊರೆಯಲಿದೆ ಇದರ ಬದಲಿಗೆ ಗಾಯಗಳಾದರೆ 50 ಸಾವಿರ ರೂ.ಗಳು ಸಿಗಲಿದೆ ಎಂದು ನಿಶಾನಿ ಜಯ್ಯಣ್ಣ ತಿಳಿಸಿದರು.

2023ರಲ್ಲಿ 2581 ಜನ ಸದಸ್ಯರನ್ನು ಹೊಂದಿದ್ದು, 44,23,000-00 ರೂ.ಗಳ ಠೇವಣಿಯನ್ನು ಹೊಂದಿದೆ. ಕಳೆದ ಸಾಲಿನಲ್ಲಿ ಸಂಘದಲ್ಲಿ 3,62,62,023-00 ಠೇವಣಿಗಳನ್ನು ಹೊಂದಿದ್ದು, 31.03.2023 ಮಾರ್ಚಿ ಅಂತ್ಯಕ್ಕೆ 4,53,96,690-00 ಠೇವಣಿಯನ್ನು ಹೊಂದಿದೆ.

ಇದೇ ದಿನಾಂಕದವರೆಗೂ 38,82,205,000 ರೂಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ತೂಡಗಿಸಲಾಗಿದೆ. ಇದೇ ಸಮಯದಲ್ಲಿ 1,86,60,373-00 ಸಾಲದ ಬಾಕಿ ಇದೆ ಇದರಲ್ಲಿ ಕಳೆದ ಸಾಲಿಗಿಂಥ ಈ ಭಾರಿ 50,20,225-00 ರೂ.ಸಾಲ ವೃದ್ದಿಯಾಗಿದ್ದು, ಇದರಲ್ಲಿ 12,32,904-00 ಸಾಲ ಸುಸ್ತಿಯಲ್ಲಿದೆ. 2202-23ನೇ ಸಾಲಿನಲ್ಲಿ 11,18,326.04 ರೂ.ಗಳ ಲಾಭ ಬಂದಿದೆ ಇದನ್ನು ತನ್ನ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಡ್‍ನ್ನು ವಿತರಣೆ ಮಾಡಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ 23 ಜನ ಸದಸ್ಯರು ಮರಣವನ್ನು ಹೊಂದಿದ್ದು, ಇವರ ಖಾತೆಗೆ ಅತ್ಯ ಸಂಸ್ಕಾರ ನಿಧಿಯಾಗಿ 25,561,91 ರೂ.ಗಳನ್ನು ನೀಡಲಾಗಿದೆ ಎಂದರು.

ಸೊಸೈಟಿ ತನ್ನ ಸದಸ್ಯರಿಗೆ 2 ಕೋಟಿಯಷ್ಟು ಸಾಲವನ್ನು ನೀಡಲು ಮುಂದಾಗಿದೆ. ಈಗ ಸೊಸೈಟಿಗೆ ಠೇವಣಿ ಹರಿದು ಬರುತ್ತಿದೆ. ಅದರ ಸದುಪಯೋಗವಾಗಬೇಕಿದೆ ಸದಸ್ಯರು ತಮಗೆ ಅನುಮಕೂಲವಾದ ಸಾಲವನ್ನು ಪಡೆಯುವಂತೆ ಮನವಿ ಮಾಡಿದ್ದು, ಈಗ ಸೊಸೈಟಿಯ ಮೇಲೆ ನಂಬಿಕೆ ಇಟ್ಟು ಸದಸ್ಯರು ತಮ್ಮ ಹಣವನ್ನು ಠೇವಣಿಯಲ್ಲಿ ಇಡುತ್ತಿದ್ದಾರೆ ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಅಧ್ಯಕ್ಷ ಜಯ್ಯಣ್ಣ ಸದಸ್ಯರುಗಳಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತೀಯ ಪಿಯು ಹಾಗೂ 75 ವರ್ಷ ದಾಟಿದ ಸೊಸೈಟಿಯ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೆಶಕರುಗಳಾದ ಡಾ.ರಹಮತ್ತುಉಲ್ಲಾ, ಬಿ.ವಿ.ಶ್ರೀನಿವಾಸ್ ಮೂರ್ತಿ, ಬಿ.ಎಂ.ನಾಗರಾಜ್‍ರಾವ್, ಕೆ.ಚಿಕ್ಕಣ್ಣ, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಶ್ರೀಮತಿ ಚಂಪಕ, ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ಭಾಗವಹಿಸಿದ್ದರು.
ಕೆಪಿಎನ್ ಗಣೇಶಯ್ಯ ಪ್ರಾರ್ಥಿಸಿದರೆ ಪುಷ್ಪವಲ್ಲಿ ಸ್ವಾಗತಿಸಿದರು, ವ್ಯವಸ್ಥಾಪಕರಾದ ಮಹಮ್ಮದ್ ನಯಿಯಮ್ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಸುದ್ದಿಒನ್, ಹೊಸದುರ್ಗ, ಮೇ. 20 : ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಸೂಗೂರುನಲ್ಲಿ ಹೆಚ್ಚು ಮಳೆ

  ಚಿತ್ರದುರ್ಗ,ಮೇ.20 : ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ,

error: Content is protected !!