ಚಿನ್ನ ಬೆಳ್ಳಿ ಬೆಲೆಯಲ್ಲಿ ಈ ತಿಂಗಳಾದರೂ ಇಳಿಕೆಯಾಗಬಹುದು ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ದರು. ಅದರಂತೆ ಕಳೆದ ವಾರದಿಂದ ಇಳಿಕೆಯತ್ತಲೇ ಮುಖ ಮಾಡಿದ್ದ ಚಿನ್ನದ ದರ ಈಗ ಇದ್ದಕ್ಕಿದ್ದ ಹಾಗೇ ಇಂದು ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಂದು ಹತ್ತು ರೂಪಾಯಿ ಏರಿಕೆಯಾಗಿದೆ. ಹಾಗಾದ್ರೆ ಇಂದಿನ ಚಿನ್ನ ಬೆಳದಳಿ ದರ ಎಷ್ಟಿದೆ ಎಂಬುದನ್ನು ನೋಡೋಣಾ.

ಇಂದು ಚಿನ್ನದ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದ್ದು ಬೆಳ್ಳಿ ಬೆಲೆ ಯಥಾಸ್ಥಿತಿ ಕಾಪಾಡಿಕೊಂಡಿದೆ. 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 10 ರೂಪಯಿ ಏರಿಕೆಯಾಗಿದ್ರೆ 24 ಕ್ಯಾರಟ್ ಅಪರಂಜಿ ಚಿನ್ನ 11 ರೂಪಾಯಿ ಏರಿಕೆಯಾಗಿದೆ. ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 71,500 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 78 ಸಾವಿರ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,250 ರೂಪಾಯಿ ಆಗಿದೆ. ಭಾರತದ ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣಾ.

ಬೆಂಗಳೂರು ನಗರ, ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರ ನಗರದಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ದರ 71,500 ರೂಪಾಯಿ ಇದೆ. ಹಾಗೇ ದೆಹಲಿಯಲ್ಲಿ 71,650 ಇದೆ. ಅಹ್ಮದಾಬಾದ್ ನಲ್ಲಿ 71,550 ರೂಪಾಯಿ ಇದೆ. ಜೈಪುರ್, ಲಕ್ನೋದಲ್ಲಿ 71,650 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ ನಗರದಲ್ಲಿ ನೂರು ಗ್ರಾಂ ಬೆಳ್ಳಿಗೆ 9,250 ರೂಪಾಯಿ ಇದೆ.

